ಗುಬ್ಬಿ ತಾಲ್ಲೂಕಿನ ಹೆಚ್ಎಎಲ್ ಘಟಕದ ಉದ್ಘಾಟನೆಗೆ ನರೇಂದ್ರ ಮೋದಿಯವರ ಆಗಮನ

ಸನ್ಮಾನ ಪ್ರಧಾನ ಮಂತ್ರಿಗಳು ಫೆಬ್ರವರಿ 6, 2023ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಹೆಚ್ಎಎಲ್ ಘಟಕ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ದಿನದಂದು ಭಾರಿ ಸರಕು ಸಾಗಾಣಿಕೆ ವಾಹನಗಳು ಮತ್ತು ಕೆಎಸ್ಆರ್ಟಿಸಿ ಬಸ್ಗಳು ಈ ಕೆಳಕಂಡಂತೆ ಬದಲಿ ಮಾಗðದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಸಿರುತ್ತಾರೆ.
ಫೆಬ್ರವರಿ 6 ರಂದು ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು-ಟಿಬಿ ಕ್ರಾಸ್-ತುರುವೇಕೆರೆ ಮಾಗðವಾಗಿ ಕೆ.ಬಿ.ಕ್ರಾಸ್ ಗೆ ಸಂಚರಿಸುವುದು. ತಿಪಟೂರಿನಿಂದ ಬರುವ ವಾಹನಗಳನ್ನು ಕೆಬಿ ಕ್ರಾಸ್-ತುರುವೇಕೆರೆ-ಟಿಬಿ ಕ್ರಾಸ್ ಮಾಗðವಾಗಿ ನಿಟ್ಟೂರಿಗೆ ಸಂಚರಿಸುವುದು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದ್ದು, ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪೋಲೀಸ್ ಇಲಾಖೆಗೆ ಸೂಚಿಸಿರುತ್ತಾರೆ.

You May Also Like