ಮಧುಗಿರಿ:ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿ ವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿದ್ದು, ಇಂದು ದೊಡ್ಡೇರಿ ಹೋಬಳಿಯ ಹಲವು ಗ್ರಾಮಗಳ ರಸ್ತೆ ಅಭಿ ವೃದ್ಧಿಗೆ 2.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ದೊಡ್ಡೇರಿ ಹೋಬಳಿಯ ಹೆಚ್.ಆರ್. ಪಾಳ್ಯ, ಗೂಬಲಗುಟ್ಟೆ, ಸೀಬಿ ನಯ್ಯನಪಾಳ್ಯ,ಜಾಲಿಹಳ್ಳಿ, ಬಡವನಹಳ್ಳಿ,ಕುರುಬರಹಳ್ಳಿ, ಹಾಗೂ ಭೂತನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಕೆ.ಟಿ. ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ,ಹಾಗೂ ನೂತನ ಶಾಲಾ ಕಟ್ಟಡ ಕಾಮ ಗಾರಿಯ ಒಟ್ಟು 2.5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನು ದಾನ ಬೇಕಿದ್ದು ಮತ್ತಷ್ಟು ಅನುದಾನ ಬೇಕಿದೆ. ಈಗಾಗಲೇ ನೂರಾರು ಕೋಟಿ ಅನುದಾನವನ್ನು ಎಲ್ಲ ಹೋಬ ಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕೆಲವು ಕಡೆ ಕಾಮಗಾರಿ ನಡೆ ಯುತ್ತಿದ್ದು ಬುಧವಾರ 2.5 ಕೋಟಿ ವೆಚ್ಚದ ಕಾಮಗಾರಿ ಶೀಘ್ರವಾಗಿ ಮುಗಿಯಲಿದೆ. ಉಳಿದಂತೆ ಯಾವುದೇ ಸಮ ಸ್ಯೆಯಿದ್ದರೂ ಆದಷ್ಟೂ ಬೇಗ ಕ್ರಮವಹಿಸಿ ಕಾಮಗಾರಿ ಕೈಗೊಳ್ಳಲು ಇಲಾಖೆಯ ಅಧಿ ಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕ್ಷೇತ್ರದ ಗ್ರಾಮೀಣ ರಸ್ತೆಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದ್ದೆ,ಆದರೆ ಕುಮಾ ರಸ್ವಾಮಿ ಸರ್ಕಾರ ಕೊಟ್ಟ ಅನು ದಾನದಂತೆ ಈಗಿನ ಸರ್ಕಾರ ಹಣಕಾಸಿನ ನೆರವು ನೀಡದ ಕಾರಣ ಕೆಲವು ರಸ್ತೆಗಳ ಅಭಿ ವೃದ್ಧಿಯಾಗಿಲ್ಲ,ಮುಂದೆ ಕುಮಾರಸ್ವಾಮಿ ಸರ್ಕಾರ ಬರಲಿದ್ದು ಮಧುಗಿರಿಯನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಎಸ್ಸಿ ಘಟಕದ ಅಧ್ಯಕ್ಷ ಗುಂಡ ಗಲ್ಲು ಶಿವಣ್ಣ,ತಾ.ಪಂ.ಮಾಜಿ ಸದಸ್ಯ ಮಂಜುನಾಥ್, ಹೋಬ ಳಿಯ ಮುಖಂಡರಾದ ಬಾವಿ ಮನೆ ಕಾಂತಣ್ಣ,ಹಂಸರಾಜ್, ವಿಶ್ವನಾಥಪ್ಪ,ರವಿ,ಸುರೇಶ್, ಕಬಾಲಿ ರಾಜು,ಸಣ್ಣ ಕಾಮ ಯ್ಯ,ರಾಜಣ್ಣ,ಪಿಡಿಓ ಅಲ್ಮಾಸ್, ರಂಗನಾಥ್ ಸೇರಿದಂತೆ ಇತರರು ಇದ್ದರು.