ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿಯಿಂದ ಪೊಲೀಸರಿಗೆ ಸೂಚನೆ

ತುಮಕೂರು:

ಜಿಲ್ಲಾಧಿಕಾರಿ
ವೈ. ಎಸ್. ಪಾಟೀಲ್
ಪ್ರಧಾನ ಮಂತ್ರಿಗಳು ಫೆಬ್ರವರಿ 6 ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಹೆಚ್‍ಎ ಎಲ್ ಘಟಕ ಉದ್ಘಾಟನಾ ಕಾರ್ಯ ಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ದಿನದಂದು ಭಾರಿ ಸರಕು ಸಾಗಾಣಿಕೆ ವಾಹನಗಳು ಮತ್ತು ಕೆಎಸ್‍ಆರ್‍ಟಿಸಿ ಬಸ್‍ಗಳು ಈ ಕೆಳಕಂಡಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆದೇಶಿಸಿ ರುತ್ತಾರೆ.
ಫೆಬ್ರವರಿ 6ರಂದು ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು-ಟಿಬಿ ಕ್ರಾಸ್-ತುರುವೇಕೆರೆ ಮಾರ್ಗ ವಾಗಿ ಕೆ.ಬಿ.ಕ್ರಾಸ್‍ಗೆ ಸಂಚ ರಿಸುವುದು.ತಿಪಟೂರಿನಿಂದ ಬರುವ ವಾಹನಗಳನ್ನು ಕೆಬಿ ಕ್ರಾಸ್-ತುರುವೇಕೆರೆ-ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂ ರಿಗೆ ಸಂಚರಿಸುವುದು.ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿ ಸಲಾಗಿದ್ದು,ತಪ್ಪಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ಕೈಗೊ ಳ್ಳುವಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚಿಸಿರುತ್ತಾರೆ.

You May Also Like