ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಬಾಲ್ಯ ವಿವಾಹ ವಿರುದ್ಧ ಅಪರಾಧಿಗಳಿಗೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಜಾಗೃತಿ ಅಭಿಯಾನ ನಡೆಸುವುದರ ಬೆನ್ನಲ್ಲೇ ಶುಕ್ರವಾರ 1800 ಮಂದಿ ಅಪರಾಧಿಗಳನ್ನು ಬಂಧಿಸಲಾಗಿದೆ.
ಅಸ್ಸಾಂನಲ್ಲಿ ಕಳೆದ 15 ದಿನಗಳೊಳಗೆ 4004 ಬಾಲ್ಯ ವಿವಾಹ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಮದುವೆಯಾಗುವವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಫೋಕ್ಸ್ ಕಾಯ್ದೆ ಯಡಿ ಮತ್ತು 14 ರಿಂದ 18 ವರ್ಷ ವಯಸ್ಸಿನ ಒಳಗಿನ ವಿವಾಹಿತರನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಡಿ ಪ್ರಕರಣ ದಾಖಲಿಸಲಾಗುತ್ತಿದೆ.
ಅಸ್ಸಾಂ ಪೊಲೀಸರು ರಾಜ್ಯಾದ್ಯಂತ 4004 ಪ್ರಕರಣಗಳನ್ನು ದಾಖಲಿಸಿದ್ದು ಮುಂದಿನ ದಿನಗಳಲ್ಲಿ ಇದರ ವಿರುದ್ಧ ಪೊಲೀಸರು ತೀವ್ರ ಕ್ರಮ ಕೈಗೊಳ್ಳಲಿದ್ದಾರೆ. ರಾಜ್ಯ ಸಚಿವ ಸಂಪುಟವು ಜನವರಿ 23 ರಂದು ಬಾಲ್ಯ ವಿವಾಹ ವಿರುದ್ಧದ ಅಪರಾಧಿಗಳಿಗೆ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಂಡಿತ್ತು. ಇದರ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ 4004 ಪ್ರಕರಣಗಳು ದಾಖಲಾಗಿವೆ.
15 ಜಿಲ್ಲೆಗಳ ಪೈಕಿ ಧುಬ್ರಿ ಜಿಲ್ಲೆಯಲ್ಲಿ ಗರಿಷ್ಠ 370 ಪ್ರಕರಣಗಳು ದಾಖಲಾಗಿವೆ.
ಕಮಿಷನರೇಟ್ ನಲ್ಲಿ 192 ಮತ್ತು ಗೋಲ್ ಪಾರ ಜಿಲ್ಲೆಯಲ್ಲಿ 157 ಪ್ರಕರಣಗಳು ದಾಖಲಾಗಿವೆ.