ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರ ನೇತೃತ್ವದಲ್ಲಿ ಫೆಬ್ರವರಿ 18ರಂದು 49ನೇ ಜಿಎಸ್‌ಟಿ ಸಮಿತಿ ಸಭೆ ನವ ದೆಹಲಿಯಲ್ಲಿ ನಡೆಯಲಿದ್ದು ಈ ಸಭೆಯಲ್ಲಿ ಪಾನ್ ಮಸಾಲ ಮತ್ತು ಗುಟ್ಕಾ ಕಂಪನಿ ಗಳು, ಮೇಲ್ಮನವಿ ನ್ಯಾಯಾಧೀಕರಣಗಳ ಸ್ಥಾಪನೆ ಮತ್ತು ಆನ್ಲೈನ್ ಗೇಮಿಂಗ್ ಕಾಸಿನೋ ಮತ್ತು ಕುದುರೆ ರೇಸ್ ಗಳ ಮೇಲಿನ ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.