ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮನ

ಬೆಂಗಳೂರು ತುಮಕೂರಿಗೆ ಮೋದಿಯವರು ಬರಲಿದ್ದು ಒಂದೇ ದಿನದಲ್ಲಿ ಆರು ಕಾರ್ಯಕ್ರಮಗಳಲ್ಲಿ ಭಾಗಿ

ದೇಶದ ಅತಿ ದೊಡ್ಡ ಹೆಲಿಕ್ಯಾಪ್ಟರ್ ತಯಾರಿ ಘಟಕದ ಉದ್ಘಾಟನೆ

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳ ದಲ್ಲಿ ಸುಮಾರು 615 ಎಕರೆ ಪ್ರದೇಶದಲ್ಲಿ ದೇಶದ ಅತಿ ದೊಡ್ಡ ಹೆಲಿಕ್ಯಾಪ್ಟರ್ ತಯಾರಿಕಾ ಘಟಕವನ್ನು ಮೋದಿಯವರು ಉದ್ಘಾಟಿಸಲಿದ್ದಾರೆ. ಎಚ್ ಎ ಎಲ್ ಸಂಸ್ಥೆ ಮುಂದಿನ 20 ವರ್ಷಗಳಲ್ಲಿ ನಾಲ್ಕು ಲಕ್ಷ ಕೋಟಿ ಮೌಲ್ಯದ ಸಾವಿರಕ್ಕೂ ಹೆಚ್ಚು ಹೆಲಿಕ್ಯಾಪ್ಟರ್ ತಯಾರಿಸುವ ಗುರಿಯನ್ನು ಹೊಂದಿದೆ.

ಇತರ ಐದು ಕಾರ್ಯಕ್ರಮಗಳಲ್ಲಿ ಮೋದಿಯವರು ಭಾಗಿ

1. ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ ಉದ್ಘಾಟಿಸಲಿದ್ದಾರೆ.

2. ವಿವಿಧ ರಾಜ್ಯಗಳ 67 ಬಂಕ್ ಗಳಲ್ಲಿ ಪ್ರಾಯೋಗಿಕವಾಗಿ ಶೇಕಡಾ 20 ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿತರಣೆಗೆ ಚಾಲನೆ.

3. ಏಕ ಬಳಕೆ ಪ್ಲಾಸ್ಟಿಕ್ ನಿಂದ ತಯಾರಿಸಿದ ವಿನೂತನ ಸಮವಸ್ತ್ರ ಬಿಡುಗಡೆ

4. ಮೂರು ಹಂತದಲ್ಲಿ 8484 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ತುಮಕೂರು ಕೈಗಾರಿಕಾ ಟೌನ್ ಶಿಪ್ ಗೆ ಶಂಕು

5. ತಿಪಟೂರು ಚಿಕ್ಕನಾಯಕನಹಳ್ಳಿಯ 545 ಕೋಟಿ ವೆಚ್ಚದ ಜಲಜೀವನ್ ಕುಡಿವ ನೀರು ಯೋಜನೆಗೆ ಅಡಿಗಲ್ಲು

You May Also Like