2024ರ ಪ್ಯಾರಿಸ್ ಮತ್ತು 2028 ರ ಲಾಸ್ ಏಂಜಲೀಸ್ ಗೆ ಭಾರತ ತಯಾರಿ ನಡೆಸುತ್ತಿದೆ . ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುತ್ತ ಭಾರತ ಗಮನ ಹರಿಸಿದೆ. ಹೀಗಾಗಿ ಭಾರತೀಯ ಅಥ್ಲೀಟ್ ಗಳ ಸಿದ್ಧತೆಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆಗಾಗಿ ಕ್ರೀಡಾ ಸಚಿವಾಲಯ, ಭಾರತೀಯ ಒಲಂಪಿಕ್ ಅಸೋಸಿಯೇಷನ್ ಮತ್ತು ಇತರ ಮಧ್ಯಸ್ಥ ಗಾರರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಅಲ್ಲದೆ ಭಾರತ 2036ರ ಒಲಂಪಿಕ್ಸ್ ಅನ್ನು ದೇಶದಲ್ಲಿ ಆಯೋಜಿಸಲು ಬಿಡ್ಡಿಂಗ್ ನಲ್ಲಿ ಭಾಗವಹಿಸಲು ಆಸಕ್ತಿ ತೋರಿದೆ. ಮುಂಬರುವ ಸಪ್ಟೆಂಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆಯುವ ಐ ಓ ಸಿ ಅಧಿವೇಶನಕ್ಕೂ ಮುಂಚಿತವಾಗಿ ಅದರ ಮಾರ್ಗಸೂಚಿಯನ್ನು ಪ್ರಸ್ತುತ ಪಡಿಸಬಹುದು.
ಕ್ರೀಡಾ ಸಚಿವಾಲಯ ರಚಿಸಿರುವ 17 ಸದಸ್ಯರ ಸಮಿತಿಗೆ ಕ್ರೀಡಾ ಸಚಿವರು ಮುಖ್ಯಸ್ಥರಾಗಿರುತ್ತಾರೆ. ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ, ಉಪಾಧ್ಯಕ್ಷ ಗಗನ್ ನಾರಂಗ್, ಕಾರ್ಯಕಾರಿ ಮಂಡಳಿ ಸದಸ್ಯ ಯೋಗೇಶ್ವರ್ ದತ್, ಅಥ್ಲೀಟ್ ಆಯೋಗದ ಅಧ್ಯಕ್ಷ ಎಂ ಸಿ ಮೇರಿ ಕೋಮ್ ಮತ್ತು ಎಸಿ ಸದಸ್ಯರಾದ ಶರತ್ ಕಮಲ್ ರಾಣಿ ರಾಂಪಾಲ್ ಈ ಸಮಿತಿಯಲ್ಲಿದ್ದಾರೆ.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನ ಅಧ್ಯಕ್ಷರ ಜೊತೆಗೆ ಮಾಜಿ ಹಾಕಿ ಆಟಗಾರ ವೀರೇನ್ ರಸ್ಕ್ವಿನ್ಹಾ ಸಮಿತಿಯ ಭಾಗವಾಗಿದ್ದಾರೆ. ಭಾರತೀಯ ಕ್ರೀಡ ಪ್ರಾಧಿಕಾರದ ಮಹಾನಿರ್ದೇಶಕರು ಮತ್ತು ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ ಸಿಇಓ ಕೂಡ ಸಮಿತಿಯಲ್ಲಿದ್ದಾರೆ.