ಫೆ. 8 ರಂದು RBl ಹಣಕಾಸು ನೀತಿ ಪ್ರಕಟ

 RBI ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಫೆ.8ರಂದು ಪ್ರಕಟಿಸಲಿದ್ದು, ಆರ್ಥಿಕತೆಯ ಮಂದಗತಿಯ ಕಳವಳ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇದೆ.

RBI ಗವರ್ನರ್ ಆದ ಶಕ್ತಿ ಕಾಂತ್ ದಾಸ್ ರವರ ನೇತೃತ್ವ ದಲ್ಲಿ 6 ಸದಸ್ಯರ ಹಣಕಾಸು ನೀತಿ ಸಮಿತಿ ಅಭಿವೃದ್ಧಿ ಹಾಗೂ ಜಾಗತಿಕ ಹಣಕಾಸು ಪರಿಸ್ಥಿತಿಗೆ ಪೂರಕವಾಗಿ ನಿರ್ಧರಿಸುವ ನಿರೀಕ್ಷೆ ಇದೆ. ರೆಪೊ ದರ ಏರಿಕೆಯಾದರೆ ಅದನ್ನು ಆಧರಿಸಿದ ಗೃಹ, ವಾಹನ ಕಾರ್ಪೋರೇಟ್ ಸಾಲ ತುಟ್ಟಿಯಾಗಲಿದೆ.

RBI ರೆಪೊ ದರದಲ್ಲಿ 0.25% ನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ರಾಯ್ಟರ್ಸ್ ಸಮೀಕ್ಷಾ ವರದಿ ಇತ್ತೀಚೆಗೆ ತಿಳಿಸಿದೆ. ಜನವರಿ 13 – 27 ಅವಧಿಯಲ್ಲಿ ಸಮೀಕ್ಷೆ ನಡೆಸಿತ್ತು.

RBI 2022 -2023ರ ಡಿಸೆಂಬರ್ ರವರೆಗೆ ಬಡ್ಡಿ ದರದಲ್ಲಿ 2.25% ಏರಿಸಿತ್ತು. ಪ್ರಸ್ತುತ ರೆಪೊ ದರ 6.25% ಇದೆ. ರೆಪೊ ದರ ಏರಿಕೆಯಾದರೆ ಠೇವಣಿಗಳ ಬಡ್ಡಿ ದರ ಮತ್ತು ಸಾಲದ ಬಡ್ಡಿ ದರ ಏರಿಕೆಯಾಗಲಿದೆ. ಕಳೆದ ಮೇ ಬಳಿಕ FD ದರಗಳು ಏರುಗತಿಯಲ್ಲಿವೆ. ಸಾಲದ EMI ಹೆಚ್ಚಳವಾಗಲಿದೆ. ಕಳೆದ ಡಿಸೆಂಬರ್ ನಿಂದ ಹಣದುಬ್ಬರ ಇಳಿಮುಖವಾಗುತ್ತಿದೆ.

You May Also Like