ಮೋತಿಲಾಲ್ ನೆಹರೂ ಪುಣ್ಯ ಸ್ಮರಣೆ

ಇಂದು ನೆಹರೂರವರ ತಂದೆ ಮೋತಿಲಾಲ್ ನೆಹರೂ ರವರ ಪುಣ್ಯ ಸ್ಮರಣೆ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ರವರ ತಂದೆ ಮೋತಿಲಾಲ್ ನೆಹರೂ ರವರ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಕುರಿತು ಕಿರುಪರಿಚಯ

1861 ಮೇ 6 ರಂದು ಜನಿಸಿದರು.ಇವರ ತಂದೆ ಗಂಗಾಧರ್ ನೆಹರೂ ತಾಯಿ ಜೀವರಾನಿ(ಜೆರೋನಿ).ಇವರು ಎರಡು ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದರು. ಒಮ್ಮೆ ಅಮೃತಸರದಲ್ಲಿ (1919), ಮತ್ತು ಎರಡನೇ ಬಾರಿ ಕೊಲ್ಕತ್ತಾದಲ್ಲಿ(1928) . ಅಸಹಕಾರ ಚಳವಳಿಯ ಸಂದರ್ಭದಲ್ಲಿ ಇವರನ್ನು ಬಂಧಿಸಲಾಯಿತು. ಗಾಂಧಿ ಯವರ ಸಮೀಪ ವರ್ತಿಯಾಗಿದ್ದರೂ, ಉತ್ತರ ಪ್ರದೇಶದ ಚೌರಿಚೌರ ದಲ್ಲಿ ನಡೆದ ಗಲಭೆಯ ಕಾರಣಕ್ಕೆ ಅಸಹಕಾರ ಚಳವಳಿಯನ್ನು ಹಿಂದಕ್ಕೆ ತೆಗೆದುಕೊಂಡ ಗಾಂಧಿಯವರ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದರು.

ಇದಾದ ನಂತರ ಸ್ವರಾಜ್ ಪಾರ್ಟಿಯಲ್ಲಿ ಸೇರಿಕೊಂಡರು. ಅದು ಬ್ರಿಟಿಷ್ ಪ್ರಾಯೋಜಿತ ಪರಿಷತ್ ಪ್ರವೇಶಿಸಲು ಯತ್ನಿಸಿತು. ಮೋತಿಲಾಲ್ ರನ್ನು ಯುನೈಟೆಡ್ ಪ್ರಾವಿನ್ಸ್ ಲೆಜಿಸ್ಲೇಟಿವ್ ಕೌನ್ಸಿಲ್ ಗೆ ಚುನಾಯಿಸಲಾಯಿತು.ಬ್ರಿಟಿಷ್ ಭಾರತದ ಹೊಸ ಸೆಂಟ್ರಲ್ ಶಾಸನ ಸಭೆಗೆ ಹೊಸ ದೆಹಲಿಯಲ್ಲಿ 1923ರಲ್ಲಿ ಚುನಾಯಿತರಾಗಿ ಪ್ರತಿ ಪಕ್ಷದ ನಾಯಕರಾದರು. ನಂತರ ಮೋತಿಲಾಲ್ ನೆಹರೂ ಮತ್ತು ಅವರ ಸಹೊದ್ಯೋಗಿಗಳು ತಮ್ಮ ಅಸೆಂಬ್ಲಿ ಸ್ಥಾನಗಳಿಗೆ ರಾಜಿನಾಮೆ ನೀಡಿ 1926ರ ಮಾರ್ಚ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.

You May Also Like