ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಸಮೀಪದ ಬಿದರೆ ಹಳ್ಳ ಕಾವಲ್ ನಲ್ಲಿ HAL ಘಟಕವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಮ್ಮ ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಯವರು ಕೂಡ ಹಾಜರಿದ್ದರು.

2016ರಲ್ಲಿ HAL ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ಪ್ರಧಾನಿಯವರೇ ಇದನ್ನು ಉದ್ಘಾಟಿಸಿರುವುದು ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಮೋದಿಯವರಿಗೆ ಅಡಿಕೆಯಿಂದ ತಯಾರಿಸಿದ ಹಾರ ಮತ್ತು ಪೇಟವನ್ನು ನೀಡಲಾಯಿತು. ಇವುಗಳ ಜೊತೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ನೀಡಿ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ವೇಳೆ ಮೋದಿಯವರು ಕನ್ನಡದಲ್ಲೇ ತುಮಕೂರು ಜನತೆಗೆ ನಮಸ್ಕಾರ ತುಮಕೂರು ಎಂದು ಹೇಳಿ ಭಾಷಣ ಪ್ರಾರಂಭಿಸಿದ್ದು ವಿಶೇಷವಾಗಿತ್ತು. ಮುಂದಿನ ದಿನಗಳಲ್ಲಿ ದೇಶೀಯ ಹೆಲಿಕಾಪ್ಟರ್ ತಯಾರಿ ನಡೆಸಿ ಬಳಸಲು ಮುಂದಾಗುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಏರೊ ಸ್ಪೇಸ್ ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವಿಶ್ವದ ಆಕರ್ಷಣೆಯ ಕೇಂದ್ರ HAL ಆಗಿದೆ. ತುಮಕೂರು ದೇಶದ ದೊಡ್ಡ ಔದ್ಯೋಗಿಕ ಕೇಂದ್ರ ಆಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಅನುದಾನ ನೀಡುವುದಾಗಿ ಕುಡಿಯುವ ನೀರು & ಭೂಮಿಗೆ ನೀರಾವರಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಬಜೆಟ್ ನ ಕೆಲ ಮುಖ್ಯ ಅಂಶಗಳ ಕುರಿತು ಮಾತನಾಡಿದ್ದಾರೆ.

ಈ ವೇಳೆಯಲ್ಲಿ ಮುಖ್ಯಮಂಂತ್ರಿ ಯವರು ಮಾತನಾಡಿ ಮೋದಿಯವರ ಹಲವು ಪ್ರಗತಿ ಪರ ಯೋಜನೆಗಳ ಕುರಿತು ಮಾತನಾಡಿದರು. ಅಲ್ಲದೇ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರು ಕೂಡ ತುಮಕೂರಿನ HAL ಘಟಕದ & ಇತರೆ ಯೋಜನೆಗಳ ಕುರಿತು ಮಾತನಾಡಿದರು.

 

 

You May Also Like