ಯೂತ್ ಗೇಮ್ಸ್ ಕರ್ನಾಟಕಕ್ಕೆ ಕಂಚು

 

ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಎಂಟನೇ ದಿನ ಕರ್ನಾಟಕ ಏಕೈಕ ಪದಕ ಗೆದ್ದಿದ್ದು, ಪದಕ ಗಳಿಕೆ 19ಕ್ಕೆ ಏರಿಕೆಯಾಗಿದೆ. ಬಾಲಕಿಯರ ಕಯಾ ಕಿಂಗ್ ಮತ್ತು ಕೆನೋ ಯಿಂಗ್ ನ ಸ್ಲಾಲೊಮ್ ಸಿ1 ವಿಭಾಗದಲ್ಲಿ ದೃತಿ ಮರಿಯಾ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮಧ್ಯಪ್ರದೇಶದ ಮಾನ್ಶಿ ಚಿನ್ನ ಹರಿಯಾಣದ ಪ್ರೀತಿ ಪಾಲ್ ಬೆಳ್ಳಿ ಗೆದ್ದರು. ಕಯಾಕಿಂಗ್ ನಲ್ಲಿ ರಾಜ್ಯಕ್ಕೆ ಇದು ಮೂರನೇ ಪದಕವಾಗಿದೆ. ಮಹಾರಾಷ್ಟ್ರ 28 ಚಿನ್ನ ಸೇರಿ 83 ಪದಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹೊಂದಿದೆ. ಹರಿಯಾಣ 23 ಚಿನ್ನ ಸೇರಿ 56 ಪದಕಗಳೊಂದಿಗೆ ಎರಡನೇ ಸ್ಥಾನವನ್ನು ಹೊಂದಿದೆ.

You May Also Like