ಸಿರಿಯಾ ಟರ್ಕಿ ಯಲ್ಲಿ ಭೂಕಂಪಕ್ಕೆ ಜನ ತತ್ತರ

ಟರ್ಕಿ ಮತ್ತು ಸಿರಿಯದಲ್ಲಿ ನಡೆದ ಭೂಕಂಪಕ್ಕೆ ಜನ ತತ್ತರ. ನೋಡಿ ನೋಡುತ್ತಿದ್ದಂತೆ ಬಾನೆತ್ತರ ಇದ್ದ ಕಟ್ಟಡಗಳು ಧರೆಗಿಳಿಯುತ್ತಿವೆ. ಅವಶೇಷಗಳಡಿ ಸಿಕ್ಕಿ ಮನುಷ್ಯನ ನರಳಾಟ. ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ. ತನ್ನವರನ್ನು ಕಳೆದುಕೊಂಡು ಕಣ್ಣೀರ ಧಾರೆ ಹರಿಯುತ್ತಿದೆ. ತನ್ನವರನ್ನು ಹುಡುಕುತ್ತಿರುವ ಜನ. ಈ ಭೂಕಂಪನದಿಂದ ಮನೆಗಳನ್ನು ಕಳೆದುಕೊಂಡು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. 5000 ಮಂದಿ ಪ್ರಾಣ ಕಳೆದುಕೊಂಡರೆ 15000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರತಿಯೊಂದು ಕ್ಷಣವೂ ಜೀವ ಕೈಯಲ್ಲಿ ಹಿಡಿದು ಕೊಂಡಿರುವ ಪರಿಸ್ಥಿತಿ ಎದುರಾಗಿದೆ. ಛಿದ್ರಗೊಂಡ ಕಟ್ಟಡ, ಸ್ಥಳದಲ್ಲೇ ಜಖಂಗೊಂಡ ವಾಹನಗಳು ಇದು ಟರ್ಕಿ ದೇಶದ ಪರಿಸ್ಥಿತಿಯಾಗಿದೆ.  ಅಲ್ಲದೇ ಕೊರೆಯುವ ಚಳಿಯಲ್ಲಿ ಕೂಡ ಟರ್ಕಿ ನಲುಗಿ ಹೋಗಿದೆ. ಭೂಕಂಪನ ತೀವ್ರತೆಯು 6.7 ಎಂದು ರಿಕ್ಟರ್ ಮಾಪಕದಲ್ಲಿ ವರದಿಯಾಗಿದೆ.24 ಗಂಟೆಯಲ್ಲಿ 2ಸಲ ಭೂಕಂಪಕ್ಕೆ ತುತ್ತಾಗಿದೆ. ಹಸುಗೂಸನ್ನು ಬಲಿ ಪಡೆದ ಭೂಕಂಪ ಅವಶೇಷಗಳಡಿ ಸಿಲುಗಿ ನರಳಾಡುತ್ತಿದ್ದ ಮಗುವೊಂದನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿದ ಮಗನಿಗಾಗಿ ತಂದೆಯ ಪ್ರಾರ್ಥನೆ. ಹೆತ್ತವರು ಮಕ್ಕಳನ್ನು ಕಳೆದುಕೊಂಡು ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಕ್ಷರಶಃ ಟರ್ಕಿ ದೇಶ ಕಣ್ಣೀರ ಕೋಡಿಯಲ್ಲಿ ಮುಳುಗಿದೆ.

You May Also Like