ಬಿ ಎಸ್ ಎಫ್ ನಲ್ಲಿ ಕಾನ್ಸ್ಟೇಬಲ್ ನೇಮಕ

ಬಿಎಸ್ಎಫ್ ನಲ್ಲಿ ಕಾನ್ಸ್ಟೇಬಲ್ ನೇಮಕ

ಭಾರತದ ಪ್ರಾಥಮಿಕ ಮುಂಚೂಣಿ ರಕ್ಷಣಾ ಪಡೆಯಾದ ಬಿ ಎಸ್ ಎಫ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್, ಕೇಂದ್ರ ಸರ್ಕಾರದ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಸಶಸ್ತ್ರ ಪಡೆಯಾಗಿದ್ದು ಐದು ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಒಂದಾಗಿದೆ ಸೇನೆ ಸೇರಿ ದೇಶ ಸೇವೆ ಮಾಡಲು ಖಾತೊರೆಯುತ್ತಿರುವ ಉತ್ಸಾಹಿ ಯುವ ಜನತೆಗೆ 2023 ನೇ ಸಾಲಿನ ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ ಹೊರಡಿಸುವ ಮೂಲಕ ಸೇನೆ ಸೇರುವ ಸುವರ್ಣ ಅವಕಾಶ ಕಲ್ಪಿಸಿದೆ ಆಸಕ್ತರು ಸದುಪಯೋಗಪಡಿಸಿಕೊಳ್ಳಬಹುದು ಅಭ್ಯರ್ಥಿಗಳು ಗಡಿ ಭದ್ರತಾ ಪಡೆಯ ಅಧಿಕೃತ ನೇಮಕಾತಿ ವೆಬ್ಸೈಟ್ನಲ್ಲಿ ಸಲ್ಲಿಸಬೇಕು ಮಹಿಳಾ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಕೊನೆಗೊಳ್ಳಲಿದೆ.

ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆ ಲಿಂಕ್ ನೀಡಲಾಗಿದ್ದು ಅದರನ್ವಯ ಸಲ್ಲಿಸತಕ್ಕದ್ದು ಅಗತ್ಯ ದಾಖಲೆ ಇಲ್ಲದ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಅರ್ಜಿಯಲ್ಲಿ ಯಾವ ಹುದ್ದೆಗೆ ಸಲ್ಲಿಸಲಾಗುತ್ತಿದೆ ಎಂಬುದನ್ನು ನಮೂದಿಸಬೇಕು ಯಾವುದೇ ಶುಲ್ಕ ನಿಗದಿಯಾಗಿಲ್ಲ ಸಂವಹನ ದೃಷ್ಟಿಯಿಂದ ಅಗತ್ಯ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಲು ತಿಳಿಸಲಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಕೆ ಕೊನೆ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ ವಯೋಮಿತಿ 18 ವರ್ಷ ಸಾಮಾನ್ಯವಾಗಿ ಗರಿಷ್ಠ ವಯೋಮಿತಿ 25 ವರ್ಷ ನಿಗದಿಪಡಿಸಲಾಗಿದೆ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ

ವಿದ್ಯಾರ್ಹತೆ

ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಎಸ್ ಎಸ್ ಎಲ್ ಸಿ ನಂತರ ಐಟಿಐ ಕಾಲೇಜುಗಳಿಂದ ಸಂಬಂಧಪಟ್ಟ ಟ್ರೇಡ್ ಗಳಲ್ಲಿ ಐಟಿಐ ಪೂರ್ಣಗೊಳಿಸಿರಬೇಕು ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ.

ವೇತನ

ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಾಸಿಕ 21,700 ರಿಂದ 69,100 ರೂ ವರೆಗೆ ನಿಗದಿಪಡಿಸಲಾಗಿದೆ ಇದರೊಂದಿಗೆ ಸಂಸ್ಥೆ ನೀಡುವ ಇತರ ಭತ್ಯೆಗಳು ಇರಲಿದೆ.

ನೇಮಕಾತಿ ವಿಧಾನ

ಮೂರು ಹಂತಗಳ ಮೂಲಕ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ

ಮೊದಲ ಹಂತ: ದೈಹಿಕ ಪ್ರಮಾಣಿತ ಪರೀಕ್ಷೆ ನಡೆಸಲಾಗುತ್ತದೆ ಅಧಿಸೂಚನೆಯಲ್ಲಿ ತಿಳಿಸಿದ ಮಾನದಂಡಗಳ ಪ್ರಕಾರವೇ ಇರಬೇಕು ಇದರಲ್ಲಿ ತೇರ್ಗಡೆ ಯಾದವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ಎರಡನೇ ಹಂತ: ಮೊದಲ ಹಂತದಲ್ಲಿ ಪಾಸಾದ ಅಭ್ಯರ್ಥಿಗಳಿಗೆ ವಿವರಣಾತ್ಮಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ.

ಅಂತಿಮ ಹಂತ: ಎರಡು ಹಂತಗಳನ್ನು ದಾಟಿ ಬಂದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಇದರಲ್ಲಿ ಪಾಸ್ ಆದವರನ್ನು ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತದೆ.

ಟ್ರೇಡ್ ವಾರು ಹುದ್ದೆಗಳ ವಿವರ

ಕೋಬ್ಲರ್ 23, ಟೈಲರ್ 13, ಪ್ಲಂಬರ್ 23, ಪೇಂಟರ್ 17, ಎಲೆಕ್ಟ್ರಿಷಿಯನ್ 12, ಪಂಪ್ ಆಪರೇಟರ್ 1, ಡ್ರಾಫ್ಟ್ ಮನ್ 8, ಅಪ್ರೋಲ್ಟರ್ 1, ಟಿನ್ ಸ್ಮಿತ್ 1, ಬಟ್ಟರ್ 1, ಕುಕ್ 480, ವಾಟರ್ ಕ್ಯಾರಿಯರ್ 294, ವಾಷರ್ ಮನ್ 132, ಬಾರ್ಬರ್ 60, ಸ್ವೀಪರ್ 277, ವೇಯ್ಟರ್ 5, ಮಾಲಿ 26 ಖೋಜಿ 36 ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಲ್ಲಾ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.

ದೇಹದಾರ್ಢ್ಯತೆ

ಪುರುಷರು:

ಎತ್ತರ 165cm, ಎದೆ ಸುತ್ತಳತೆ 75.80cm(ಉಸಿರಾಡಿದಾಗ 85cm), ತೂಕ: ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ

ಮಹಿಳೆಯರು:

ಎತ್ತರ 155cm ಎದೆ ಸುತ್ತಳತೆ: ಅನ್ವಯವಾಗುವುದಿಲ್ಲ

ತೂಕ: ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ

ಕಾನ್ಸ್ಟೇಬಲ್ (ಪುರುಷ): 1343

ಕಾನ್ಸ್ಟೇಬಲ್ (ಮಹಿಳೆ): 67

ಒಟ್ಟು ಹುದ್ದೆಗಳು:1410

ಅರ್ಜಿ ಸಲ್ಲಿಕೆ ಕೊನೆ ದಿನ: 3/3/2023

ಹೆಚ್ಚಿನ ಮಾಹಿತಿಗೆ:https://rectt.bsf.gov.in/

 

 

 

 

 

 

You May Also Like