ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ , ಇಂದು ಮೂರು ಉಪಗ್ರಹಗಳನ್ನು , ಸ್ಮಾಲ್ ಸ್ಯಾಟ್ ಲೈಟ್ ಲಾಂಚ್ ವೆಹಿಕಲ್ ಮೂಲಕ ಬಾಹ್ಯಾಕಾಶ ಕ್ಕೆ ಕಳಿಸಲಿದೆ. ಭಾರತದ ದೇಶೀಯ ನಿರ್ಮಿತ ರಾಕೆಟ್ ಮೂರು ಹೊಸ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಕಳೆದ ವರ್ಷ ದ ಉಡಾವಣೆಯ ವೈಫಲ್ಯದ ನಂತರ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಸುಮಾರು 120 ಟನ್ ತೂಕ, 34 ಮೀಟರ್ ಎತ್ತರದ ರಾಕೆಟ್ ಇಂದು ಬೆಳಗ್ಗೆ ಸುಮಾರು 9.18ಕ್ಕೆ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ಪ್ಯಾಡ್ ನಿಂದ ಬಾಹ್ಯಾಕಾಶ ಕ್ಕೆ ನೆಗೆಯಿತು. ಇಒಎಸ್-07, ಜಾನುಸ್ -1, ಮತ್ತು ಆಝಾದಿ ಎಸ್ಎಟಿ-2 ಉಪಗ್ರಹಗಳನ್ನು ಹೊತ್ತ ರಾಕೆಟ್ ಕಕ್ಷೆಗೆ ಸೇರಿಸಿತು. ಒಟ್ಟು 15 ನಿಮಿಷದಲ್ಲಿ ಭೂಮಿಯಿಂದ 450 ಕಿ.ಮೀ ಎತ್ತರದಲ್ಲಿ ಮೂರು ಉಪಗ್ರಹಗಳು ಕಕ್ಷೆಯನ್ನು ಸೇರಿಕೊಳ್ಳಲಿವೆ ಎಂದು ಇಸ್ರೋ ವಿವರಿಸಿದೆ.