ವಿಶ್ವ ದ್ವಿದಳ ಧಾನ್ಯಗಳು ದಿನ

ಪೌಷ್ಠಿಕಾಂಶದ ಆಗರ ಈ ದ್ವಿದಳ ಧಾನ್ಯಗಳು

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ (FOU) ಸಂಸ್ಥೆಯು ವಿಧಳ ಧಾನ್ಯಗಳ ದಿನವನ್ನು ಜಗತ್ತಿನಾದ್ಯಂತ ಆಚರಿಸುತ್ತದೆ. ದ್ವಿದಳ ಧಾನ್ಯಗಳನ್ನು ಜಾಗತಿಕ ಆಹಾರವಾಗಿ ಗುರುತಿಸಲು ಈ ದ್ವಿದಳ ಧಾನ್ಯಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಡಿಸೆಂಬರ್ 20 2018 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 73 ನೇ ಅಧಿವೇಶನದಲ್ಲಿ ವಿದಳ ಧಾನ್ಯಗಳ ದಿನವನ್ನು 2019 ರಿಂದ ಪ್ರತಿ ವರ್ಷ ಫೆಬ್ರವರಿ 10 ರಂದು ಆಚರಿಸಲು ನಿರ್ಧರಿಸಲಾಯಿತು.

ವಿಶ್ವ ದ್ವಿದಳ ಧಾನ್ಯಗಳ ದಿನವು ಆಹಾರ ಸುರಕ್ಷತೆ ಮತ್ತು ಪೋಷಣೆಯ ಗುರಿಯನ್ನು ಹೊಂದಿರುವ ಸುಸ್ಥಿರ ಆಹಾರ ಉತ್ಪಾದನೆಯ ಭಾಗವಾಗಿ ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಅವಕಾಶವನ್ನು ಒದಗಿಸುತ್ತದೆ

.ಪೋಷಕಾಂಶಗಳು

ದ್ವಿದಳ ಧಾನ್ಯಗಳಲ್ಲಿ ಪ್ರೋಟೀನು ಮತ್ತು ವಿವಿಧ ರೀತಿಯ ನಾರು ಹೆಚ್ಚಿನ ಪ್ರಮಾಣ ಮಟ್ಟದಲ್ಲಿದೆ ದೇಹ ರಕ್ಷಕ ಆಂಟಿ ಆಕ್ಸಿಡೆಂಟ್ ಗಳು ಉರಿಯುತ ನಿವಾರಕ ಫೈಟೋ ನ್ಯೂಟ್ರಿಯೆಂಟ್ಸ್ ಹಲವಾರು ಬಗೆಯ ಖನಿಜಾಂಶಗಳು ಮತ್ತು ಜೀವಸತ್ವಗಳಿವೆ. ಕೊಬ್ಬು ಮತ್ತು ಉಪ್ಪು ಅತಿ ಕಡಿಮೆ ಮಟ್ಟದಲ್ಲಿದೆ ಕೊಲೆಸ್ಟ್ರಾಲ್ ಇಲ್ಲ ಮಾಂಸಹಾರಕ್ಕೆ ಹೋಲಿಸಿದರೆ ದ್ವಿದಳ ಧಾನ್ಯಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿವೆ, ಒಂದು ಕ್ಯಾಲೋರಿ ನೀಡುವ ದ್ವಿದಳ ಧಾನ್ಯಗಳಲ್ಲಿ 14ರಿಂದ 23ರಷ್ಟು ಪೋಷಕಾಂಶಗಳಿದ್ದರೆ ಒಂದು ಗ್ಯಾಲರಿ ನೀಡುವ ಮಾಂಸಾಹಾರದಲ್ಲಿ 12 ರಿಂದ 18 ರಷ್ಟು ಪೋಷಕಾಂಶಗಳಿವೆ ಉತ್ತಮ ಆರೋಗ್ಯ ಕಡಿಮೆ ಕ್ಯಾಲರಿ ಹೆಚ್ಚು ಪೋಷಕಾಂಶಗಳುಳ್ಳ ಆಹಾರ ಸೇವಿಸಬೇಕು.

ಮಹತ್ವ

ಆರೋಗ್ಯ ಕಾಪಾಡುವಲ್ಲಿ ದ್ವಿದಳ ಧಾನ್ಯಗಳು ಪ್ರಮುಖವೆನಿಸಿಕೊಂಡಿವೆ ಏಕೆಂದರೆ ಪ್ರಪಂಚದಲ್ಲಿಡೆ ಸೇವಿಸುವ ಆಹಾರಗಳಲ್ಲಿ ಉತ್ತಮ ಆರೋಗ್ಯಕ್ಕೆ ಮತ್ತು ರೋಗ ನಿರ್ವಹಣೆಗೆ ಅವಶ್ಯಕವಾದ ಸಸಾರ ಜನಕ ಮತ್ತು ನಾರು ಇವುಗಳೆರಡು ಒಟ್ಟಿಗೆ ಹೆಚ್ಚು ಪ್ರಮಾಣದಲ್ಲಿ ಇರುವುದು ದ್ವಿದಳ ಧಾನ್ಯಗಳಲ್ಲಿ ಮಾತ್ರ ಆದರೆ ದಕ್ಷಿಣ ಏಷ್ಯಾ ಮಧ್ಯಪೂರ್ವ ದೇಶಗಳಲ್ಲಿ ಮಾತ್ರ ಇವುಗಳನ್ನು ಉಪಯೋಗಿಸುತ್ತಾರೆ ಅಭಿವೃದ್ಧಿ ಹೊಂದಿದ ಮತ್ತು ಪಶ್ಚಿಮಾತ್ಯ ದೇಶಗಳಲ್ಲಿ ಇವುಗಳ ಬಳಕೆ ಅತಿ ಕಡಿಮೆ ದ್ವಿದಳ ಧಾನ್ಯಗಳ ಮಹತ್ವದ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಉದ್ದೇಶದಿಂದ ದಿ ಯುನೈಟೆಡ್ ನೇಶನ್ಸ್ ವರ್ಷ 2016 ರನ್ನು ಅಂತರರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ ಎಂದು ಘೋಷಿಸಿತ್ತು. ಸಾರ್ವಜನಿಕ ಆರೋಗ್ಯ ಸಂಸ್ಥೆಗಳೆಲ್ಲವೂ ಆರೋಗ್ಯ ರಕ್ಷಣೆಗೆ ಮತ್ತು ರೋಗ ನಿಯಂತ್ರಣಕ್ಕೆ ದ್ವಿದಳ ಧಾನ್ಯಗಳನ್ನು ಸೇವಿಸುವುದು ಬಲು ಮುಖ್ಯ ಎಂದು ಸಾರುತ್ತವೆ ಡಯಾಬಿಟಿಸ್ ಹೃದಯ ರೋಗಗಳು ಕ್ಯಾನ್ಸರ್ ಮುಂತಾದ ಮಾರಕ ರೋಗಗಳನ್ನು ದೂರವಿಡಲು ವಾರಕ್ಕೆ ಮೂರರಿಂದ ನಾಲ್ಕು ದಿನವಾದರೂ ಮಾಂಸಹಾರ ಬಿಟ್ಟು ದ್ವಿದಳ ಧಾನ್ಯಗಳನ್ನು ಸೇವಿಸಿ ಎಂದು ಮಾಂಸಾಹಾರಿಗಳಿಗೆ ಕರೆ ಕೊಡುತ್ತಾರೆ

ಆರೋಗ್ಯದಾಯಕ ಗುಣಗಳು

  • ಅತ್ಯಂತ ಕಡಿಮೆ ಗ್ರಹಿಸಿ ಹೊಂದಿರುವ ದ್ವಿದಳ ಧಾನ್ಯಗಳು ಡಯಾಬಿಟಿಸ್ ನಿಯಂತ್ರಣದಲ್ಲಿ ಇಡುವುದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ
  • ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿ ಸರೈಟ್ಸ್ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ ಅಧಿಕ ರಕ್ತದ ಒತ್ತಡವನ್ನು ತಗ್ಗಿಸುತ್ತವೆ ಹೃದಯ ರೋಗಗಳನ್ನು ಹೃದಯಘಾತವನ್ನು ತಡೆಹಿಡಿಯಲು ಸಹಕಾರಿಯಾಗುತ್ತವೆ
  • ದ್ವಿದಳ ಧಾನ್ಯಗಳಲ್ಲಿರುವ ಅನೇಕ ಬಗೆಯ ನಾರು ಜೀರ್ಣಾಂಗ ಗಳನ್ನು ಸುಸ್ಥಿತಿಯಲ್ಲಿಡುತ್ತದೆ ಮಲಬದ್ಧತೆಯನ್ನು ನಿವಾರಿಸುತ್ತದೆ ಅನೇಕ ಬಗೆಯ ಕ್ಯಾನ್ಸರ್ ಮುಖ್ಯವಾಗಿ ದೊಡ್ಡ ಕರುಳಿನ ಕ್ಯಾನ್ಸರ್ ಬರದಂತೆ ತಡೆ ಹಿಡಿಯುತ್ತದೆ.

 

You May Also Like