ಮಂಜುನಾಥ ನಗರದಲ್ಲಿ ಸುಮಾರು ಒಂದೂವರೆ ವರ್ಷ ದಿಂದ ವಾಸವಾಗಿದ್ದ ಆರಿಫ್ ಎಂಬ ಉಗ್ರನ ಪತ್ತೆಯಾಗಿದ್ದು, ಪೋಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನಿಗೆ ಮದುವೆಯಾಗಿದೆ ಎಂದು ತಿಳಿದು ಬಂದಿದ್ದು, ಆತನ ಬಳಿ ಇದ್ದ ಒಂದು ಲ್ಯಾಪ್ ಟ್ಯಾಪ್ ಮತ್ತು 2 ಹಾರ್ಡ್ ಡಿಸ್ಕ್ ಅನ್ನು ವಶಡಿಸಿಕೊಳ್ಳಲಾಗಿದೆ. ಭಾರತ ವಿರೋಧ ಕಾಯðದಲ್ಲಿ ಭಾಗಿಯಾಗಿದ್ದ, ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರಿಫ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ನಮಾಜ್ ಗೆ ಹೋದರೂ ಒಬ್ಬನೇ ಹೋಗಿ ಬರುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.ಸೋಮವಾರ ಮನೆ ಖಾಲಿ ಮಾಡುವುದಾಗಿ ಮಾಲೀಕರಿಗೆ ತಿಳಿಸಿದ್ದ ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ. ಈತನ ಜೊತೆ ಪತ್ನಿಯೂ ವಾಸವಾಗಿದ್ದು ಈತನ ಕೃತ್ಯಗಳ ಬಗ್ಗೆ ಆಕೆಗೆ ಗೊತ್ತಿಲ್ಲ ಎಂದು ಪತ್ನಿಯು ತಿಳಿಸಿದ್ದಾರೆ. ಅಲ್ಖೈದಾ ಬಳಿ ಸುಮಾರು 2 ವರ್ಷಗಳಿಂದ ನಂಟನ್ನು ಬೆಳೆಸಿಕೊಂಡಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಟೆಲಿಗ್ರಾಮ್ ಗ್ರೋಪ್ ಮಾಡಿಕೊಂಡು ಯುವಕರನ್ನು ಸೆಳೆಯುತ್ತಿದ್ದ, ಉಗ್ರಸಂಘಟನೆಗಳ ಪರವಾಗಿ ಪೋಸ್ಟ್ ಹಾಕುತ್ತಿದ್ದ. ಎಂದು ಎನ್ಐಎ ಮತ್ತು ಐಎಸ್ ಡಿ ಅಧಿಕಾರಿಗಳ ತನಿಖೆ ವೇಳೆ ತಿಳಿದುಬಂದಿದೆ. ಹೀಗೆ ತನಿಖೆ ಮುಂದುವರೆದಿದೆ.