ಖಗೋಳ ವಿಜ್ಞಾನಿಗಳಿಗೆ ತೀವ್ರ ಅಚ್ಚರಿ
ಸೂರ್ಯನಿಂದ ಬೃಹತ್ ಭಾಗ ಒಂದು ಬೇರ್ಪಟ್ಟಿದ್ದು ಇದು ಸೂರ್ಯನ ಉತ್ತರ ಧ್ರುವದಲ್ಲಿ ಸುರುಳಿಯಕಾರದಲ್ಲಿ ಸುತ್ತತ ತೊಡಗಿದೆ ಎಂಬುದನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಪತ್ತೆ ಹಚ್ಚಿದೆ ಇದು ಖಗೋಳ ವಿಜ್ಞಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಅಲ್ಲದೆ ಇದರಿಂದ ಭೂಮಿಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಬಗ್ಗೆ ಅಧ್ಯಯನ ಆರಂಭವಾಗಿದೆ.
11 ವರ್ಷಗಳ ಹಿಂದೆ ಇಂಥ ವಿದ್ಯಮಾನ ನಡೆದಿದ್ದರೂ ಈಗ ಹಿಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಬೃಹತ್ ಭಾಗ ಸೂರ್ಯನಿಂದ ಬೇರ್ಪಟ್ಟಿದೆ ಜೊತೆಗೆ ಸೂರ್ಯನಿಂದ ಈವರೆಗೂ ಬಿಡುಗಡೆಯಾಗುತ್ತಿದ್ದ ಸೌರ ಜ್ವಾಲೆಗಳು ಭೂಮಿಯಲ್ಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತಿದ್ದವು ಆದರೆ ಈ ಸಲ ಬೇರ್ಪಟ್ಟ ಭಾಗದಿಂದ ಬೃಹತ್ ಸೌರಜ್ ವಾಲೆಗಳು ಹೇಳುತ್ತಿವೆ ಇದು ಉಪಗ್ರಹಗಳಿಂದ ಬರುವ ಸಂವಹನ ತರಂಗಗಳ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದೇ ಎಂಬುದರ ಕುರಿತಾಗಿ ಅಧ್ಯಯನಗಳು ನಡೆಯುತ್ತಿವೆ ಜೇಮ್ಸ್ ವೆಬ್ ಟೆಲಿಸ್ಕೋಪ್ ಸೆರೆಹಿಡಿದಿರುವ ವಿಡಿಯೋವನ್ನು ಹವಾಮಾನ ತಜ್ಞೆ ಡಾ.ತಮೀಹಾ ಸ್ಕೋವ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕಳಚಿದ ತುಂಡು.
- ಸೂರ್ಯನ ಉತ್ತರ ಭಾಗದಲ್ಲಿ ಪ್ರತಿ 11 ವರ್ಷಕ್ಕೊಮ್ಮೆ ಹೇಳುವ ಸೌರಜ್ವಾಲೆ
- ಹಿಂದೆಂದಿಗಿಂತ ತೀವ್ರ ಜ್ವಾಲೆ ಬೇರ್ಪಟ್ಟ ಅತಿ ದೊಡ್ಡ ಸೌರ ಮಾರುತ
- ಇದರಿಂದ ಭೂಮಿಯ ಮೇಲೇನೂ ಪರಿಣಾಮ ಎಂಬುದು ಇನ್ನು ಸ್ಪಷ್ಟವಾಗಿಲ್ಲ
- ಸಾಮಾನ್ಯವಾಗಿ ಸೌರ ಜ್ವಾಲೆಗಳಿಂದ ಉಪಗ್ರಹ ಸಮೂಹನದ ಮೇಲೆ ಪರಿಣಾಮ
- ಈ ಸಲ ಭಾರಿ ಜ್ವಾಲೆ ಬೇರ್ಪಟ್ಟಿರುವುದರಿಂದ ದುಷ್ಪರಿಣಾಮವಾಗುವ ಆತಂಕ