ಸೇನೆಗೆ ದೇಶಿಯ ಶಸ್ತ್ರಾಸ್ತ್ರ ಬಲ

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ದೇಶದಲ್ಲಿ 2.58 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ದೇಶಿಯವಾಗಿ ಉತ್ಪಾದಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2019-2020,2020-2021 ಮತ್ತು 2021-2022ನೇ ವರ್ಷದಲ್ಲಿ ಕ್ರಮವಾಗಿ 79, 071 ಕೋಟಿ, 84,643 ಕೋಟಿ ಮತ್ತು 94,846 ಕೋಟಿ ರೂ. ಸೇರಿದಂತೆ ಒಟ್ಟು 2,58,560 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ದೇಶಿಯವಾಗಿ ಉತ್ಪಾದಿಸಲಾಗಿದೆ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಲೋಕಸಭೆಗೆ ತಿಳಿಸಿದ್ದಾರೆ ಈ ಸಂಬಂಧದ ಡೇಟಾವನ್ನು ಅವರು ಸದನಕ್ಕೆ ಸಲ್ಲಿಸಿದ್ದಾರೆ ದೇಶದಲ್ಲಿ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಲು ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್ ಸ್ಥಾಪಿಸಿದೆ ಎಂದು ಹೇಳಿದರು ಭಾರತದ ಸಶಸ್ತ್ರ ಪಡೆಗಳು ಮುಂದಿನ ಐದು ವರ್ಷಗಳಲ್ಲಿ ಸುಮಾರು 130 ಶತಕೋಟಿ ಡಾಲರನ್ನು ಬಂಡವಾಳ ಸಂಗ್ರಹಣೆಯಲ್ಲಿ ಖರ್ಚು ಮಾಡುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ ಸೇನಾ ಸಾಮಗ್ರಿಗಳಿಗೆ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಿ ದೇಶಿಯ ರಕ್ಷಣಾ ಉತ್ಪಾದನೆ ಬೆಂಬಲಿಸಲು ನಿರ್ಧರಿಸಲಾಗಿದೆ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ 25 ಶತಕೋಟಿ ಡಾಲರ್ ವಹಿವಾಟಿನ ಗುರಿ ಹೊಂದಲಾಗಿದೆ ಇದರಲ್ಲಿ ಐದು ಶತಕೋಟಿ ಡಾಲರ್ ಮೌಲ್ಯದ ಮಿಲಿಟರಿ ಹಾರ್ಡ್ ವೇರ್ ರಫ್ತು ಗುರಿ ಸೇರಿದೆ ಎಂದು ಉತ್ತರಿಸಿದ್ದಾರೆ.

ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ 2020 -21ರಲ್ಲಿ 44 ಶತಕೋಟಿ ಡಾಲರ್ ಇತ್ತು ಅದು 2021- 22 ರಲ್ಲಿ 73.3 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಅನುಪ್ರಿಯ ಪಟೇಲ್ ಹೇಳಿದ್ದಾರೆ.

You May Also Like