ಚೊಚ್ಚಲ ಮಹಿಳಾ ಪ್ರೀಮಿಯರ್ ಟಿ 20 ಲೀಗ್ ನ (ಮಹಿಳಾ ಐಪಿ ಎಲ್) ಹರಾಜು ಪ್ರಕ್ರಿಯೆ ಇಂದು ನಡೆಯಲಿದ್ದು ತಾರಾ ಆಟಗಾರ್ತಿಯರಾದ ಸ್ಮೃತಿ ಮಂದನ, ಹರ್ಮನ್ ಪ್ರೀತ್ ಕೌರ್ ಮತ್ತು ಶಫಾಲಿವರ್ಮ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಮಲೈಕಾ ಸಾಗರ್ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.
ವಿದೇಶಿ ತಾರಾ ಆಟಗಾರ್ತಿಯರಾದ ಅಲಿಸ್ಸಾ ಹೀಲಿ, ಬೆತ್ ಮೂನಿ ಎಲೆಸ್ಸೆ ನೆಲ್ಲಿ, ನಾಟ್ ಸೀವರ್, ಮೆಗಾನ್ ಸ್ಕಟ್ ಮತ್ತು ವಿಂಡೀಸ್ ನಾ ಡೆಂಡ್ರಾ, ಡೊಟಿನ್ ವರುಗಳನ್ನು ಖರೀದಿಸಲು ಫ್ರಾನ್ಚೈಸಿಗಳು ಮುಗಿ ಬೀಳಲಿವೆ.
ಐದು ತಂಡಗಳಾದ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ ಆರ್ ಸಿ ಬಿ ಗುಜರಾತ್ ಜೈಯಂಟ್ಸ್ ಮತ್ತು ಯುಪಿ ವಾರಿಯರ್ಸ್ ಫ್ರಾನ್ಚೈಸಿಗಳು 409 ಆಟಗಾರ್ತಿಯರ ಪೈಕಿ 90 ಆಟಗಾರ್ತಿಯರನ್ನು ಖರೀದಿಸಲಿದೆ.
ಪ್ರತಿ ತಂಡಗಳಿಗೆ 12 ಕೋಟಿ ನಿಗದಿ ಮಾಡಲಾಗಿದೆ ಆರು ವಿದೇಶಿ ಆಟಗಾರ್ತಿಯರನ್ನು ಸೇರಿ ಪ್ರತಿ ತಂಡದಲ್ಲಿ 18 ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ 60 ಭಾರತೀಯ ಆಟಗಾರ್ತಿಯರು ಖರೀದಿಯಾಗುವ ಸಾಧ್ಯತೆ ಇದೆ ಕನಿಷ್ಠ 10 ಲಕ್ಷ ಗರಿಷ್ಠ 50 ಲಕ್ಷಕ್ಕೆ ಆಟಗಾರ್ತಿಯರನ್ನು ಖರೀದಿಯ ಅತ್ಯುತ್ತಮ ಮತವಾಗಿದೆ ಭಾರತ-ಆಸ್ಟ್ರೇಲಿಯಾ ಇಂಗ್ಲೆಂಡ್ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ಆಟಗಾರ್ತಿಯರಿಗೆ ಹೆಚ್ಚಿನ ಬೇಡಿಕೆ ಇದೆ ಸ್ಮೃತಿ ಮಂದನ ಶಫಾಲಿ ಹರ್ಮನ್ ಪ್ರೀತ್ ಆಲ್-ರೌಂಡರ್ ದೀಪ್ತಿ ಶರ್ಮ 1.25 ಕೋಟಿ ಯಿಂದ ದ 2 ಕೋಟಿ ವರೆಗೂ ಬಿಡ್ ಆಗುವ ಸಾಧ್ಯತೆ ಇದೆ.