ಮಂಗಳ ಗ್ರಹದಲ್ಲಿ ನೀರಿನ ಸುಳಿವು

ಮಂಗಳ ಗ್ರಹದ ಬಗ್ಗೆ ವಿಜ್ಞಾನಿಗಳು ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಮಂಗಳನ ಅಂಗಳದಲ್ಲಿ ನೀರು ಇದ್ದುದರ ಕುರುಹನ್ನು ಕ್ಯೂರಿಯಾಟಿಸಿ ರೋವರ್ ಬಾಹ್ಯಾಕಾಶ ನೌಕೆ ಪತ್ತೆ ಮಾಡಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಮಂಗಳ ಗ್ರಹದಲ್ಲಿ ನೀರಿರಲು ಸಾಧ್ಯವಿಲ್ಲ ಅದು ಶುಷ್ಕ ಪ್ರದೇಶ ಎಂದು ಇಲ್ಲಿಯವರೆಗೆ ವಿಜ್ಞಾನಿಗಳು ಪರಿಗಣಿಸಿದ್ದರು. ಆದರೆ ಛಾಯಾಚಿತ್ರಗಳ ಪ್ರಕಾರ ನೂರಾರು ಕೋಟಿ ವರ್ಷಗಳ ಹಿಂದೆ ಅಲ್ಲಿ ಕಡಿಮೆ ನೀರಿದ್ದ ಸರೋವರ ವಿತ್ತು. ಅದರ ತಳದಲ್ಲಿದ್ದ ಸುಣ್ಣದಕಲ್ಲು ಮೃದುವಾಗಿತ್ತು. ನೀರಿನ ಅಲೆಗಳು ನಿರಂತರ ಬಂಡೆಗೆ ಅಪ್ಪಳಿಸಿದ್ದರಿಂದ ಅಲೆಗಳ ಆಕಾರ ರೂಪಗೊಂಡಿದೆ ಎಂದು ನಾಸಾ ತಿಳಿಸಿದೆ.

You May Also Like