ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲು ಗುಪ್ತ ವರದಿ

ರಾಜ್ಯ ವಿಧಾನಸಭೆ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವ ಬದಲು ಎರಡು ಅಥವಾ ಮೂರು ಹಂತಗಳಲ್ಲಿ ನಡೆಸುವುದು ಸೂಕ್ತವೆಂದು ಗುಪ್ತದಳ ಭಾರತ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ.

2013 ಮಹಾ ಹಾಗೂ 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳು ಒಂದೇ ಹಂತದಲ್ಲಿ ನಡೆದಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ ಆದರೆ ಈ ಬಾರಿ ಶಾಂತಿಯುತವಾಗಿ ನಡೆಯುವ ಸಾಧ್ಯತೆಗಳಿಲ್ಲ ಎಂಬ ಆತಂಕವನ್ನು ಗುಪ್ತ ದಳ ವ್ಯಕ್ತಪಡಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಬಾರಿಯ ಚುನಾವಣೆ ಒಂದಿಲ್ಲೊಂದು ಕಾರಣಕ್ಕೆ ರಾಜ್ಯದಲ್ಲಿನ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿ ಮಾರ್ಪಟ್ಟಿದೆ ಸ್ವಂತ ಶಕ್ತಿಯ ಮೇಲೆ ಅಧಿಕಾರದ ಸೂತ್ರವನ್ನು ನಡೆಯಬೇಕು ಎಂಬುದು ಮೂರು ಪಕ್ಷಗಳ ಗುರಿಯಾಗಿದೆ. ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಜಿದ್ದಾಜಿದ್ದಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿವೆ. ರಾಜಕೀಯ ನಾಯಕರ ನಡುವೆ ಮಾತಿನ 8 ಎದಿರೇಟು ಕೇಳಿ ಬರುತ್ತಿದೆ ಚುನಾವಣೆ ದಿನ ಹತ್ತಿರ ಬಂದಂತೆ ಇನ್ನಷ್ಟು ತೀವ್ರ ವಾಗುವ ಎಲ್ಲಾ ಲಕ್ಷಣಗಳು ಇವೆ ಈ ಹಂತದಲ್ಲಿ ಶಾಂತಿ ಮತ್ತು ಸವ್ಯವಸ್ಥೆ ಕಾಪಾಡುವುದು ಅತಿ ಮುಖ್ಯವಾಗಿದೆ ಆದ್ದರಿಂದಲೇ ಒಂದೇ ಹಂತದಲ್ಲಿ ಚುನಾವಣೆ ಬೇಡ ಎಂದು ಗುಪ್ತದಳ ಆತಂಕ ವ್ಯಕ್ತಪಡಿಸುತ್ತಿದೆ ನಾಯಕರ ಮಾತಿನ ವರಸೆ ಆಯಾ ಪಕ್ಷಗಳ ಕಾರ್ಯಕರ್ತರಿಗೆ ಪ್ರಚಾರದ ಹಣ ಯಾವ ಮಟ್ಟಕ್ಕೆ ಬೇಕಾದರೂ ಮುಟ್ಟಬಹುದೆಂದು ಹೇಳಲಾಗುತ್ತಿದೆ.

2 ಹಂತವಾದರೆ ಅನುಕೂಲವೇನು

  • ಪೊಲೀಸರನ್ನು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ನಿಯೋಜಿಸಲು ಅನುಕೂಲ
  • ಹಿಂಸೆ ನಡೆಯದಂತೆ ತಡೆಗಟ್ಟಬಹುದು
  • ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕೆ ಅನುಕೂಲ

ಖರ್ಚು ಹೆಚ್ಚು

ಎರಡು ಅಥವಾ ಹೆಚ್ಚಿನ ಹಂತಗಳಲ್ಲಿ ಚುನಾವಣೆ ನಡೆದರೆ ಅಭ್ಯರ್ಥಿಗಳಿಗೆ ಖರ್ಚು ಹೆಚ್ಚಾಗಲಿದೆ ಎಂಬ ಆತಂಕವು ಇದೆ ಆದರೆ ಖರ್ಚಾದಷ್ಟು ತಳಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂಬ ವಾದವು ಇದೆ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸುವ ಕೆಲಸ ಈಗ ಆಯೋಗದ ವತಿಯಿಂದ ಆರಂಭವಾಗಿದೆ.

You May Also Like