13 ಹೊಸ ರಾಜ್ಯಪಾಲರ ನೇಮಕ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕರ್ನಾಟಕ ಮೂಲದ ಅಬ್ದುಲ್ ನಜೀರ್ ಸೇರಿದಂತೆ ಆರು ಜನ ಹೊಸಬರನ್ನು ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಏಳು ರಾಜ್ಯಗಳ ರಾಜ್ಯಪಾಲರನ್ನು ಅದಲು ಬದಲು ಮಾಡಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಜನರಲ್ ಕೈವಲ್ಯ  ತ್ರಿವಿಕ್ರಮ ಪಾರ್ನಾಯಕ್, ಲಕ್ಷ್ಮಣ ಪ್ರಸಾದ್ ಆಚಾರ್ಯ, ಸಿಪಿ ರಾಧಾಕೃಷ್ಣನ್, ಶಿವಪ್ರತಾಪ್ ಶುಕ್ಲ ಮತ್ತು ಗುಲಾಬ್ ಚಂದ್ ಕತಾರಿಯ ಹೊಸದಾಗಿ ನಿಯುಕ್ತರಾದ ರಾಜ್ಯಪಾಲರು.

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಷ್ಯಾರಿ ಮತ್ತು ಲಡಾಕ್ ನ ಉಪರಾಜ್ಯಪಾಲ ಆರ್ ಕೆ ಮಾಥುರ್  ಅವರು ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ ಕೋಶ್ಯಾರಿ ಸ್ಥಾನಕ್ಕೆ ಜಾರ್ಖಂಡಿನ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ನೇಮಿಸಲಾಗಿದೆ.ಆರ್.ಕೆ ಮಾಥುರ್ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ರಾಜ್ಯಪಾಲ ನಿವೃತ್ತ ಬ್ರಿಗೇಡಿಯರ್ ಬಿ ಡಿ ಮಿಶ್ರ ನಿಯುಕ್ತಿಯಾಗಿದ್ದಾರೆ.

ವಿಶ್ವಭೂಷಣ ಹರಿ ಚಂದನ್, ಸುಶ್ರೀ ಅನುಸೂಯ ಉಯಿಕೆ, ಲಾ ಗಣೇಶನ್, ಫಗು ಚೌಹಾಣ್, ರಾಜೇಂದ್ರ ವಿಶ್ವನಾಥ ಅರ್ಲೇಕರ್ ರಮೇಶ್ ಬೈಸ್ ಮತ್ತು ನಿವೃತ್ತ ಬ್ರಿಗೇಡ್ ಬಿ ಡಿ ಮಿಶ್ರಾ ಮೊದಲಾದ ರಾಜ್ಯಪಾಲರುಗಳನ್ನು ಅನ್ಯ ರಾಜ್ಯಕ್ಕೆ ವರ್ಗಾಯಿಸಲಾಗಿದೆ.

You May Also Like