ಕೊರಟಗೆರೆಯಲ್ಲಿ ಉದ್ಯೋಗ ಮೇಳ

ದೇಶದಅಭಿವೃದ್ಧಿ ಬೆಳವಣಿಗೆಗೆ ಕೃಷಿಕರು -ಯುವಸಮುದಾಯದ ಪಾಲಿದೆ :ಡಾ.ಜಿ.ಪರಮೇಶ್ವರ

*ಕೊರಟಗೆರೆಯಲ್ಲಿ ಉದ್ಯೋಗ ಮೇಳದಲ್ಲಿ ಶಾಸಕರ ಕರೆ
* ೬೦ ಕ್ಕೂ ಹೆಚ್ಚು ಕಂಪನಿಗಳಿಗೆ- ೨೨೬೦ ಮಂದಿ ನೊಂದಣಿ-೫೨೦ ಮಂದಿಗೆ ಉದ್ಯೋಗ

ಕೊರಟಗೆರೆ : ಹಳ್ಳಿ ಜನರ ಬುದ್ದಿ ಶಕ್ತಿ ಯಾವುದಕ್ಕುಕಡಿಮೆಇಲ್ಲ. ಅವರಿಗೆ ತರಬೇತಿಗಳನ್ನು ಕೊಟ್ಟು ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಟ್ಟಾಗ ದೇಶದ ಅಭಿವೃದ್ಧಿಗೆ ಯುವಸಮುದಾಯ ಮತ್ತು ಕೃಷಿಕ ಸಮುದಾಯದ ಕೊಡುಗೆ ಅನನ್ಯವಾಗಿರುತ್ತದೆ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರರವರು ಅಭಿಪ್ರಾಯಪಟ್ಟರು.
ಕೊರಟಗೆರೆಯ ಸರಕಾರಿ ಪ್ರಥಮ ದರ್ಜೆಕಾಲೇಜಿನ ಆವರಣದಲ್ಲಿ ಇಂದು ನಡೆದ ಉದ್ಯೋಗ ಮೇಳಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನ ನೀಡಿದ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ಉದ್ಯೋಗ ಮೇಳದಲ್ಲಿ ೬೦ ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಯಾವಾಗಲು ಧನಾತ್ಮಕ ಚಿಂತನೆಗಳ ಕಡೆ ಗಮನ ಹರಿಸಬೇಕು. ಕೀಳರಿಮೆಯಿಂದ ನಮ್ಮನ್ನು ನಾವೇ ಅಳಿಯಬಾರದು. ಮನುಷ್ಯನಿಗೆ ಮನಸ್ಸು ಮಾಡಿದರೇ ಎಷ್ಟೋ ಕಠಿಣ ಕೆಲಸಗಳನ್ನು ಗಿಟ್ಟಿಸಿಕೊಳ್ಳಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಆತ್ಮಸ್ಥೆöÊರ್ಯ ತುಂಬಿದರು.
ವಿಶ್ವದಲ್ಲಿ ಅತಿ ಹೆಚ್ಚು ಮಾನವ ಸಂಪನ್ಮೂಲಗಳನ್ನು ಹೊಂದಿರುವ ದೇಶ ನಮ್ಮದು. ಇಲ್ಲಿನ ಸಂಪನ್ಮೂಲಗಳ ಬಳಕೆ ವಿದೇಶಕ್ಕೆ ಹೆಚ್ಚಾಗಿ ಆಗುತ್ತದೆ. ಆದರೆ ಮುಂದಿನ ದಿನದಲ್ಲಿ ರಾಜ್ಯ ಮತ್ತು ದೇಶಕ್ಕೆ ಸಿಗಬೇಕಾದರೆ, ಹಳ್ಳಿಗಾಡಿನ ಮಕ್ಕಳು ಉದ್ಯೋಗ ದೊರಕಿಸಿಕೊಳ್ಳಲುಬೇಕಾದ ನೈಪುಣ್ಯತೆಗಳನ್ನು ರೂಢಿಸಿಕೊಳ್ಳಬೇಕು. ಸೂಕ್ತ ರೀತಿಯಲ್ಲಿ ತರಬೇತಿ ಪಡೆಯುವಲ್ಲಿ ಮುಂದಾಗಬೇಕಿದೆ ಎಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು.
ಕೊರಟಗೆರೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇನ್ನಷ್ಟು ಸುಧಾರಣೆ ಮತ್ತು ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ ಅವರು, ಮುಂದಿನ ದಿನ ಮಾನಗಳಲ್ಲಿ ಕೊರಟಗೆರೆಯಲ್ಲಿ ಡಿಪ್ಲೊಮಾ ಕಾಲೇಜನ್ನು ಪ್ರಾರಂಭಿಸುದಾಗಿ ಡಾ.ಜಿ.ಪರಮೇಶ್ವರಅವರು ಭರವಸೆ ನೀಡಿದರು.
ರಾಜ್ಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕಿ ಸಾಧನಾ ಪೋಟೆ ಮಾತನಾಡಿ, ಅನುಭವ ಮತ್ತು ಕೌಶಲ್ಯಗಳಿಂದ ವೃತ್ತಿ ಬದುಕನ್ನು ಹಸನು ಮಾಡಿಕೊಳ್ಳಿ. ಅಸಾಧ್ಯವನ್ನು ಸಾಧ್ಯ ಮಾಡುವ ಕಲೆ ಕರಗತ ಮಾಡಿಕೊಳ್ಳಿ. ಯಾವುದೇ ಉದ್ಯೋಗವಾಗಲಿ ಮನಸ್ಸಿಚ್ಚೆಯಾಗಿ ಮಾಡಿ. ಅದು ನಾವು ನಮ್ಮ ವೃತ್ತಿಗೆ ಕೋಡುವ ಗೌರವ ಎಂದರು.
ವೇತನಕ್ಕೇ ಸಿಮೀತವಾಗಿ ಉದ್ಯೋಗದಿಂದ ಉದ್ಯೋಗಕ್ಕೆ ಹೋಗಬೇಡಿ ನಿಮ್ಮ ವೃತ್ತಿಗೆ ನೈಪುಣ್ಯತೆ ಮತ್ತು ಆತ್ಮತೃಪ್ತಿ ಇರಲಿ. ಇದು ನಿಮ್ಮಜೀವನದ ಅಭಿವೃದ್ಧಿಗೆ ಪೂರಕವಾಗುತ್ತದೆ. ಇಂದಿನ ದಿನ ಎಷ್ಟೇಲ್ಲಾ ಕಲಿತು ಮತ್ತೇ ನಿರುದ್ಯೋಗ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಶಿಕ್ಷಣ ಕಲಿತವರಷ್ಟೆ ಜಾಣರಲ್ಲ. ಎಲ್ಲರಲ್ಲೂ ಒಂದು ಕಲೆ ಇರುತ್ತದೆ. ಅದನ್ನು ಗುರುತಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲೇ ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಾಧನಾ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು, ಉದ್ಯೋಗ ಮೇಳ ಹಲವಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿದೆ. ತಂದೆ ತಾಯಿಗಳ ಆಸೆ, ಮಕ್ಕಳಿಗೆ ಉದ್ಯೋಗ ಸಿಗಲಿ ಅನ್ನೋದಾಗಿದೆ. ಆ ಆಸೆಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಬಂದಿದೆ ಎಂದರು.
ತುಮಕೂರು, ಬೆಂಗಳೂರಿನ ಸುತ್ತ ಮುತ್ತಲಿನ ಕೈಗಾರಿಕೆಗಳಿಗೆ ಸಂಪರ್ಕ ಮಾಡಿ, ಉದ್ಯೋಗ ಮೇಳ ಆಯೋಜಿಸಿ, ಆ ಮೂಲಕ ತಾಲ್ಲೂಕಿನ ಮಕ್ಕಳಿಗೆ ಕೆಲಸದ ಸೌಕರ್ಯಗಳನ್ನು ಕೊಡಿಸಲು ಶಾಸಕರಾದ ಡಾ.ಜಿ.ಪರಮೇಶ್ವರ ಅವರು ಕಾರ್ಯೋನ್ಮಖರಾಗಿ, ಹಲವಾರು ಸಂಘ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ಈ ಅವಕಾಶ ಒದಗಿಸಿಕೊಟ್ಟಿದ್ದಾರೆ ಎಂದು ಹಾಲಪ್ಪ ನುಡಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ.ಕೆ ಅವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಉದ್ಯೋಗ ಪ್ರಪಂಚ ಬಹಳ ಸ್ಪರ್ಧಾತ್ಮಕವಾಗಿದೆ. ನಮ್ಮ ಹೆಚ್ಚಿನ ಕೌಶಲ್ಯ ನಮಗೆ ದಾರಿ ಮಾಡಿಕೊಡುತ್ತವೆ. ನಾವು ಮೊದಲು ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಹುಡುಕಿಕೊಳ್ಳಿ. ಸರ್ಕಾರದಲ್ಲಿ ಅನೇಕ ಯೋಜನೆಗಳಿವೆ. ಅದನ್ನೇಲ್ಲಾ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಸನ್ನ, ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಮ್.ಎಸ್.ರವಿಪ್ರಕಾಶ, ಜಿಲಾ ್ಲಉದ್ಯೋಗ ಮತ್ತು ವಿನಿಮಯ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಪಿ.ನಾಗೇಶ್, ಸಿದ್ದಾರ್ಥ ಇಂಜಿನಿಯರಿAಗ್ ಕಾಲೇಜಿನ ಉದ್ಯೋಗ ಮತ್ತು ನೇಮಕಾತಿ ವಿಭಾಗದ ಅಧಿಕಾರಿಡಾ. ಅಶೋಕ ಮೆಹ್ತಾ, ವಿವಿಧ ಪದವಿ ಕಾಲೇಜಿನ ಪ್ರಾಂಶುಪಾಲರು ಮತ್ತು ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಕೊರಟಗೆರೆ ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು.


೫೨೦ ಮಂದಿ ಆಯ್ಕೆ:
೬೦ ಕ್ಕೂ ಹೆಚ್ಚಿನ ಕಂಪನಿಗಳು ಈ ಮೇಳದಲ್ಲಿ ಭಾಗಿಯಾಗಿದ್ದು, ೨೨೬೦ ವಿದ್ಯಾರ್ಥಿಗಳು ನೊಂದಣಿ ಮಾಡಿಸಿದ್ದಾರೆ. ೫೨೦ ಮಂದಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ೬೦೦ ಮಂದಿ ಎರಡನೆ ಹಂತಕ್ಕೆ ಆಯ್ಕೆಯಾಗಿದ್ದಾರೆ. ಮತ್ತಷ್ಟು ವಿದ್ಯಾರ್ಥಿಗಳಿಗೆ ಕೆಲವು ಕಂಪನಿಗಳು ಉದ್ಯೋಗ ನೀಡುವ ಭರವಸೆ ನೀಡಿವೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಅಭಿವೃದ್ಧಿ ನಿಗಮದ ಮಾಜಿಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ಹಾಜರಿದ್ದರು.

 

You May Also Like