ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ೨೦೨೪ರಲ್ಲಿ ಐತಿಹಾಸಿಕ ಮಾನವರಹಿತ ಗಗನಯಾನ ಯೋಜನೆ ಕಾರ್ಯಗತಕ್ಕೆ ನಿಶ್ಚಯಿಸಿದ್ದು, ಇದಕ್ಕೆ ಪೂರಕವಾಗಿ ‘ಆರ್ಬಿಟಲ್ ಮಾಡ್ಯೂಲ್’ ಸಿದ್ಧಪಡಿಸಿದೆ. ಇದನ್ನು ಏರೋ ಇಂಡಿಯಾದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದು, ಜನರನ್ನು ಆಕರ್ಷಿಸುತ್ತಿದೆ. ಮಾನವಸಹಿತ ಸ್ಪೇಸ್ ಲೈಟ್ ಪ್ರೋಗ್ರಾಂ-ಆರ್ಬಿಟಲ್-ಮಾಡ್ಯೂಲ್ ಹೆಸರಿನಲ್ಲಿ ೨ ವರ್ಷಗಳಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ. ಇದರ ವಿನ್ಯಾಸವನ್ನು ಇಸ್ರೋ ಮಾಡಿದ್ದು ಎಚ್‌ಎಎಲ್ ಅಭಿವೃದ್ಧಿಪಡಿಸಿದೆ. ಈ ಆರ್ಬಿಟಲ್ ಮಾಡ್ಯೂಲ್‌ನಲ್ಲಿ ಮೂವರು ಗಗನಯಾತ್ರಿಗಳು ಕುಳಿತುಕೊಳ್ಳಬಹುದಾಗಿದ್ದು, ೫ ಮಂದಿವರೆಗೆ ವಿಸ್ತರಿಸಬಹುದಾಗಿದೆ. ಗಗನಯಾತ್ರಿಗಳಿಗೆ ನ್ಯಾವಿಗೇಷನ್ ಮಾರ್ಗದರ್ಶನ, ಯಾನಕ್ಕೆ ಅಗತ್ಯವಿರುವ ನಿಯಂತ್ರಣ ವ್ಯವಸ್ಥೆ ಇದರಲ್ಲಿದೆ. ಆರ್ಬಿಟಲ್ ಮಾಡ್ಯೂಲ್ ೬.೫ ಮೀ. ಎತ್ತರ ೩.೭ ಮೀ ವ್ಯಾಸವನ್ನು ಒಳಗೊಂಡಿದ್ದು, ೬ ಟನ್ ತೂಕವಿದೆ.
ಆರ್ಬಿಟಲ್ ಮಾಡ್ಯೂಲ್?
ಉಪಗ್ರಹ ಕೇಂದ್ರಗಳಲ್ಲಿ ಉಡಾವಣೆ ಮಾಡುವ ಪೋಲಾರ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್‌ನಲ್ಲಿ ಮೇಲಿನ ಹಂತವೇ ಈ ಆರ್ಬಿಟಲ್ ಮಾಡ್ಯೂಲ್. ಉಡಾವಣೆ ಬಳಿಕ ಮೊದಲ ೩ ಹಂತಗಳು ಕಕ್ಷೆಯಲ್ಲಿಯೇ ಉಳಿಯಲಿದ್ದು, ಮೇಲಿನ ಹಂತದಲ್ಲಿರುವ ಯಂತ್ರವು ಬಾಹ್ಯಾಕಾಶವನ್ನು ಸೇರುತ್ತದೆ. ಇಲ್ಲಿ ಗಗನಯಾತ್ರಿಗಳು ಕುಳಿತುಕೊಳ್ಳುವ ವ್ಯವಸ್ಥೆ ಇರುವ ಸಾಧನವೇ ‘ಆರ್ಬಿಟಲ್ ಮಾಡ್ಯೂಲ್’.
ಎಚ್‌ಎಎಲ್ ಉತ್ಪನ್ನಕ್ಕೆ ಹೆಚ್ಚಾದ ಬೇಡಿಕೆ
ಆತ್ಮ ನಿರ್ಭರ ಯೋಜನೆಯ ಫಲವಾಗಿ ಎಚ್‌ಎಎಲ್‌ಗೆ ಪ್ರಸಕ್ತ ಸಾಲಿನಲ್ಲಿ ೮೪ ಸಾವಿರ ಕೋಟಿ ರೂ. ಮೊತ್ತದ ಉಪಕರಂಗಳ ಬೇಡಿಕೆ ಬಂದಿದ್ದು, ಮತ್ತೆ ೫೦ ಸಾವಿರ ಕೋಟಿ ರೂ. ಮೊತ್ತದ ಉಪಕರಣಗಳ ಬೇಡಿಕೆಯು ಕಾರ್ಯಗತಗೊಳಿಸುವ ವಿವಿಧ ಹಂತದಲ್ಲಿವೆ ಎಂದು ಎಚ್‌ಎಎಲ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ವಿವಿಧ ರಾಷ್ಟçಗಳಿಂದ ಲಘು ಯುದ್ಧವಿಮಾನ ತೇಜಸ್ ಗೆ ಬೇಡಿಕೆ ಬರುತ್ತಿದೆ. ಅರ್ಜೆಂಟಿನಾ ೧೫ ಹಾಗೂ ಈಜಿಫ್ಟ್ ೨೦ ತೇಜಸ್ ಗಳ ಖರೀಧೀಗೆ ಮುಂದೆ ಬಂದಿದೆ. ಇದಲ್ಲದೆ ಮಲೇಷಿಯಾ ಫಿಲಿಫೈನ್ಸ್ ಕೂಡ ಆಸಕ್ತಿ ತೋರಿದ್ದು ಮಾತುಕತೆ ನಡೆದಿದೆ. ಜತೆಗೆ ಹೆಲಿಕಾಫ್ಟರ್ ಒಳಗೊಂಡAತೆ ರಕ್ಷಣಾ ವಲಯದ ಇತರೆ ಉಪಕರಣಗಳ ಪೂರೈಕೆಗೂ ಬೇಡಿಕೆ ಬಂದಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದ ಇದರ ಲಾಭ ಎಚ್‌ಎಎಲ್ ಗೆ ಅಧಿಕ ಪ್ರಮಾಣದಲ್ಲಿ ದೊರೆಯುತ್ತಿದೆ. ತೇಜಸ್ ಮಾತ್ರವಲ್ಲ; ತೇಜಸ್ ಮಾಕ್-೨, ಐಜಿಟಿ, ಎಚ್‌ಎಲ್‌ಎಫ್‌ಟಿ-೪೨, ಎಚ್‌ಟಿಟಿ-೪೦ ಮತ್ತಿತರ ಹೆಲಿಕಾಪ್ಟರ್‌ಗಳು ಹಾಗೂ ಅದರ ವೈಮಾನಿಕ ಕ್ಷೇತ್ರದ ಉಪಕರಣಗಳ ತಯಾರಿಕೆಗೂ ಪುಷ್ಟಿ ಸಿಕ್ಕೆದೆ ಎಂದು ಹೇಳಿದರು.
ಹನುಮಂತನ ಚಿತ್ರ ತೆರವು:
ಹನುಮಂತನAತೆ ಶಕ್ತಿಶಾಲಿಯಾದ ಯುದ್ಧ ವಿಮಾನ ಎಂದು ಬಿಂಬಿಸಲು ಫೋಟೋ ಹಾಕಲಾಗಿತ್ತು. ನಂತರ ಸೂಕ್ತ ಅನಿಸಲಿಲ್ಲ. ಹಾಗಾಗಿ ತೆರವುಗೊಳಿಸಲಾಗಿದೆ ಎಂದು ಎಚ್‌ಎಎಲ್ ತಿಳಿಸಿದೆ.
ಆರ್ಬಿಟಲ್ ಮಾಡ್ಯೂಲ್ ಸಿದ್ಧ
ಈ ಆರ್ಬಿಟಲ್ ಮಾಡ್ಯೂಲ್ ಅನ್ನು ಸದ್ಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಬಳಿಕ ಯೋಜನೆ ಕೈಗೊಳ್ಳಲಾಗುತ್ತದೆ ಎಂದು ಎಚ್‌ಎಎಲ್ ಸಿಬ್ಬಂದಿ ತಿಳಿಸಿದರು.
ಮಹತ್ವಾಕಾಂಕ್ಷೆ ಯೋಜನೆ
ಭೂಮಿಯಿಂದ ೪೦೦ ಕಿ.ಮೀ. ಎತ್ತರದ ಬಾಹ್ಯಕಾಶದಲ್ಲಿ ಮೂರು ಗಗನಯಾತ್ರಿಗಳು ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಲಿದ್ದಾರೆ. ನಂತರ ಇವರನ್ನು ಸುರಕ್ಷಿತವಾಗಿ ಮತ್ತೆ ಭುಮಿಗೆ ವಾಪಸ್ ಕರೆಸಿಕೊಳ್ಳಲಾಗುತ್ತದೆ. ಈ ಮೊದಲು ಭಾರತದ ರಾಕೇಶ್ ಶರ್ಮಾ ರಷ್ಯಾ ನೌಕೆಯಲ್ಲಿ ಗಗನಯಾತ್ರೆ ನಡೆಸಿದ್ದರು. ಆದರೆ ಮೊದಲ ಬಾರಿಗೆ ಭಾರತದ ಸಂಸ್ಥೆ ಭಾರತೀಯರನ್ನೇ ಬಾಹ್ಯಕಾಶಕ್ಕೆ ಕಳಿಸಲು ಯೋಜನೆ ರೂಪಿಸಿದೆ.
೨೦೨೫ ಕ್ಕೆ ಮಾಕ್-೨ ಹಾರಾಟ
ಈಗ ಎಚ್‌ಎಎಲ್ ತೇಜಸ್ ಮಾಕ್-೨ ಯೋಜನೆಗೆ ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದು, ೨೦೨೪ರ ಡಿಸೆಂಬರ್ ವೇಳೆಗೆ ಪುರ್ಣಪ್ರಮಾಣದ ಅತ್ಯಾಧುನಿಕ ಯುದ್ಧವಿಮಾನ ತಯಾರಾಗಲಿದೆ. ೨೦೨೫ರ ಸೆಪ್ಟೆಂಬರ್ ನವೆಂಬರ್ ವೇಳೆಗೆ ಹಾರಾಟ ನಡೆಸಲಿದೆ. ತುಮಕೂರಿನಲ್ಲಿ ಈಚೆಗೆ ಲೋಕಾರ್ಪಣೆಗೊಂಡ ಹೆಲಿಕಾಪ್ಟರ್ ತಯಾರಿಕಾ ಘಟಕದಲ್ಲಿ ವಾರ್ಷಿಕ ೩೦ ಹೆಲಿಕಾಫ್ಟರ್‌ಗಳು ತಯಾರಾಗಲಿದ್ದು, ಬೇಡಿಕೆಗೆ ಅನುಗುಣವಾಗಿ ಈ ಸಂಖ್ಯೆಯನ್ನು ಹಂತ ಹಂತವಾಗಿ ೯೦ ಕ್ಕೆ ಹೆಚ್ಚಿಸಲು ಅವಕಾಶವಿದೆ ಎಂದು ಸಿ.ಬಿ ಅನಂತಕೃಷ್ಣನ್ ಮಾಹಿತಿ ನೀಡಿದರು.