ತಿಂಗಳಾoತ್ಯಕ್ಕೆ ನಗರದಲ್ಲಿ ೩೪ ಡಿಗ್ರಿ ಉರಿಬಿಸಿಲು

ಬೆಂಗಳೂರಿನಲ್ಲಿ ತಿಂಗಳಾAತ್ಯಕ್ಕೆ ಬಿಸಿಲು ಮತ್ತಷ್ಟು ಹೆಚ್ಚಾಗಲಿದ್ದು, ಗರಿಷ್ಠ ಉಷ್ಣಾಂಶವು ೩೩ ಡಿಗ್ರಿ ಸೆಲ್ಸಿಯಸ್ ನಿಂದ ೩೪ ರವರೆಗೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯ ತಜ್ಞರು ಎಚ್ಚರಿಸಿದ್ದಾರೆ.
ವಾಡಿಕೆ ಪ್ರಕಾರ ಜನವರಿಯಿಂದ ಚಳಿಗಾಲ, ಮಾರ್ಚ್ನಿಂದ ಬೇಸಿಗೆಕಾಲ ಆರಂಭಗೊಳ್ಳಬೇಕು. ಆದರೆ ಈ ಬಾರಿಯ ಋತುಮಾನಗಳು ಒಂದೊAದು ತಿಂಗಳು ಮೊದಲೇ ಆರಂಭವಾದAತಿದೆ. ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಕೊರೆಯುವ ಚಳಿ ಶುರುವಾಗಿತ್ತು. ಇದೀಗ ಫೆಬ್ರವರಿಯಲ್ಲಿಯೇ ಬಿಸಿಲು ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ನಗರದಲ್ಲಿ ಗರಿಷ್ಠ ಉಷ್ಣಾಂಶವು ೩೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು ಶನಿವಾರ ೩೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ತಿಂಗಳ ಅಂತ್ಯಕ್ಕೆ ಗರಿಷ್ಠ ಉಷ್ಣಾಂಶದ ಪ್ರಮಾಣ ೩೩ ರಿಂದ ೩೪ ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಲೇ ಒದ್ದಾಡುತ್ತಿರುವ ಬೆಂಗಳೂರಿಗರು ಮತ್ತೆರಡು ಡಿಗ್ರಿ ಹೆಚ್ಚಾದರೆ ಮತ್ತಷ್ಟು ತತ್ತರಿಸಲಿದ್ದಾರೆ.
ಫೆಬ್ರವರಿಯಲ್ಲಿ ಈ ಪ್ರಮಾಣ ಉಷ್ಣಾಂಶ ದಾಖಲಾಗುವುದು ವಿಶೇಷವಲ್ಲ. ಮಾರ್ಚ್ನಿಂದ ಅಧಿಕೃತವಾಗಿ ಬೇಸಿಗೆ ಆರಂಭಗೊಳ್ಳುವುದರಿAದ ಫೆಬ್ರವರಿಯಲ್ಲಿ ಬಿಸಿಲ ಪ್ರಮಾಣ ಹೆಚ್ಚಾಗಲಿದೆ. ಸಾರ್ವಕಾಲಿಕ ಅಂಕಿ ಅಂಶದ ಪ್ರಕಾರ ಈವರೆಗೆ ಫೆಬ್ರವರಿಯಲ್ಲಿ ಗರಿಷ್ಠ ಉಷ್ಣಾಂಶವು ೩೫.೫ ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ವಾರಾಂತ್ಯಕ್ಕೆ ಮತ್ತೊಂದು ಡಿಗ್ರಿ ಹೆಚ್ಚಳ : ಭಾರತೀಯ ಹವಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ವಾರಾಂತ್ಯಕ್ಕೆ ಗರಿಷ್ಠ ಉಷ್ಣಾಂಶವು ೩೨ ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ. ಇನ್ನು ಕನಿಷ್ಠ ಉಷ್ಣಾಂಶವು ೧೭ ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ನಗರದಲ್ಲಿ ಸೆಕೆಯು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
೩ ಬಾರಿ ೩೫ ಡಿಗ್ರಿ ಹೆಚ್ಚು ಉಷ್ಣಾಂಶ: ಕಳೆದ ೨೦೧೧ರಿಂದ ೨೦೨೩ರ ಫೆಬ್ರವರಿ ತಿಂಗಳಲ್ಲಿ ಒಟ್ಟು ಮೂರು ಬಾರಿ ಗರಿಷ್ಠ ಉಷ್ಣಾಂಶವು ೩೫ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲಾಗಿದೆ. ೨೦೧೨ ರಲ್ಲಿ ೩೫.೪, ೨೦೧೬ ಹಾಗೂ ೨೦೧೭ ರಲ್ಲಿ ೩೫.೫ ಡಿಗ್ರಿ ಸೆಲಸಿಯಸ್ ದಾಖಲಾಗಿದೆ.

You May Also Like