ತಳ ಸಮುದಾಯದ ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳನ್ನು ಗುರುತಿಸಿ ಅವುಗಳನ್ನು ಮುನ್ನೆಲೆಗೆ ತರಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ‘ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ’ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕನ್ನಡ ಭವನದಲ್ಲಿಂದು ಆಯೋಜಿಸಿದ್ದ ಮೂಲಸಂಸ್ಕೃತಿ ಕನ್ನಡ ಸಂಸ್ಕೃತಿ-೨೦೨೩ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ತಳಸಮುದಾಯಗಳ ಕಲಾ ಪ್ರಕಾರಗಳನ್ನ ಪುನರ್ ಜೀವನಗೊಳಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ. ಎಲ್ಲಾ ದೇಶಗಳನ್ನು ಅಲ್ಲಿನ ಸಂಸ್ಕೃತಿ ಮತ್ತು ಕಲೆಗಳ ಮೂಲಕ ಗುರುತಿಸಲಾಗುತ್ತದೆ. ಭಾರತದಲ್ಲಿ ಜಾನಪದ ಶೈಲಿಯ ಜೀವನ ಪದ್ದತಿ, ಭಾಷಾ ಪದ್ಧತಿ, ವೈವಿಧ್ಯಮಯ ಆಹಾರ ಪದ್ಧತಿ, ವಿಭಿನ್ನವಾದ ಉಡುಗೆತೊಡುಗೆಗಳನ್ನು ಕಾಣಬಹುದು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಿಭಿನ್ನವಾದ ಸಂಸ್ಕೃತಿ ಆಗಿರುತ್ತದೆ ಆದರೇ ಎಲ್ಲರೂ ಆಚರಿಸುವುದು ಕೂಡಾ ಜಾನಪದ ಸಂಸ್ಕೃತಿಯಾಗಿದೆ ಎಂದರು.
ತಳ ಸಮುದಾಯಗಳಲ್ಲಿ, ಜಾನಪದದ ವಿಶಿಷ್ಟ ವಿಭಿನ್ನವಾದ ಕಲೆಗಳನ್ನು ವಾದ್ಯಗಳ ಮೂಲಕ ನುಡಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಹಾಗೂ ಅವರ ಮನಸ್ಸನ್ನು ಬದಲಾವಣೆ ಮಾಡುವ ಕೆಲಸವನ್ನು ಮಾಡಲಾಗುತ್ತದೆ. ಪ್ರಸ್ತುತ ದಿನಗಳ ಸಿನಿಮಾದಲ್ಲಿ ಬರುವ ಸಾಹಿತ್ಯದಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ, ಆದರೇ ಜನಪದ ಸಾಹಿತ್ಯದ ೫ ನಿಮಿಷ ಹಾಡಿನಲ್ಲಿ ವ್ಯಕ್ತಿಯ ಜೀವನದ ಬದಲಾವಣೆ ಕುರಿತು ಹೇಳಲಾಗುತ್ತದೆ. ಈ ದೇಶದ ಮೂಲ ಆಸ್ಮಿತೆ ಎಂದರೆ ಅದು ಜಾನಪದ ಎಂದರು.
ಆಧುನಿಕ ದಿನಗಳಲ್ಲಿ ತಳಸಮುದಾಯದ ಕಲೆಗಳು ನಶಿಸಿ ಹೋಗುತ್ತಿರುವ ಪರಿಣಾಮ ಅವುಗಳನ್ನು ಮತ್ತೆ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಿಂದಿನ ವರ್ಷದ ಬಜೆಟ್‌ನಲ್ಲಿ ಈ ಕಾರ್ಯಕ್ರಮವನ್ನು ಘೋಷಣೆ ಮಾಡಿತ್ತು. ಪ್ರತಿ ಜಿಲ್ಲೆಯಿಂದ ೧೦ಜನರ ತಂಡದ ೫ ಕಲಾ ಪ್ರಕಾರಗಳನ್ನು ಗುರುತಿಸಿ, ನಶಿಸಿ ಹೋದಂತಹ ಕಲೆಗಳ ಕುರಿತು ತರಬೇತಿಯನ್ನು ನೀಡಲಾಗಿದೆ. ಪ್ರತಿ ಜಿಲ್ಲೆಯಿಂದ ೨ ತಂಡಗಳನ್ನು ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ ಅವರು ಮಾತನಾಡುವುದಕ್ಕಿಂತ ಕಲೆಯನ್ನು ನಿಮ್ಮ ಮುಂದೆ ಪ್ರದರ್ಶಿಸುತ್ತೇನೆ ಎಂದು ಹೇಳಿ ತಮ್ಮ ತಮಟೆ ಕಲೆಯನ್ನು ಪ್ರದರ್ಶಿಸಿದರು.
ಕನ್ನಡ ಮತ್ತು ಸಂಸ್ಕೃತಿಯ ಜಂಟಿ ನಿದೇರ್ಶಕ ಬಲವಂತರಾವ್ ಪಾಟೀಲ್ ಮಾತನಾಡಿ ಮನುಷ್ಯನ ನಾಗರೀಕತೆಯ ಜೊತೆಗೆ ಸಂಸ್ಕೃತಿಯು ಕೂಡಾ ಬೆಳೆದುಕೊಂಡು ಬಂದಿದೆ. ಆಧುನಿಕತೆ ಬೆಳೆದಂತೆ ಕಲೆಗಳು ಕಣ್ಮರೆಯಾಗುತಿವೆ ಶ್ರೀಮಂತ ಪರಂಪರೆಯನ್ನು ಹೊಂದಿರುವAತಹ ಕಲೆಗಳನ್ನು ಉಳಿಸುವುದಕ್ಕಾಗಿ ತರಬೇತಿಯನ್ನು ಪಡೆದು ಕಲಾವಿದರು ಕಲೆಯನ್ನು ಮುಂದುವೆರಿಸಿಕೊAಡು ಹೋಗಬೇಕು ಎಂದು ಹೇಳಿದರು.
ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ನಿದೇರ್ಶಕ ಡಿ.ಎಂ. ರವಿಕುಮಾರ್ ಸ್ವಾಗತಿಸಿದರು ಹಾಗೂ ಕೆಂಕೆರೆ ಮಲ್ಲಿಕಾರ್ಜುನ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗ ಜಂಟಿ ನಿದೇರ್ಶಕ ಅಶೋಕ್ ಎನ್. ಛಲವಾದಿ, ಕಲಾಶ್ರೀ ಡಾ. ಲಕ್ಷö್ಮಣ್‌ದಾಸ್, ಶಿವಕುಮಾರ್ ಸಾಕೇಲ್, ಎ. ಆರ್. ಪುಟ್ಟಸ್ವಾಮಿ ಉಪಸ್ಥಿತರಿದ್ದರು.