ಜಿಲ್ಲಾ ಮಟ್ಟದ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಜಿಲ್ಲಾ ಮಟ್ಟದ ಸ್ವಸಹಾಯ ಗುಂಪುಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ, ಮಾರಾಟ ಹಾಗೂ ಉದ್ಯೋಗ ಮೇಳವನ್ನು ಫೆಬ್ರವರಿ ೨೨ ರಿಂದ ೨೪ರವರೆಗೆ ಮಾತಾ ರೆಸಿಡೆನ್ಸಿ ಆವರಣ, ಕೆಬಿ ಕ್ರಾಸ್, ತಿಪಟೂರು ಇಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರುಗಳು ಉತ್ಪಾದಿಸುವ ರೇಷ್ಮೆ ಸೀರೆಗಳು, ಗೃಹೋಪಯೋಗಿ ವಸ್ತುಗಳು, ಗ್ರಾಮೀಣ ಗುಡಿ ಕೈಗಾರಿಕಾ ವಸ್ತುಗಳು, ತಿಂಡಿ ತಿನಿಸುಗಳು, ಸಾಂಬಾರ್ ಪದಾರ್ಥಗಳು, ಅಲಂಕಾರಿಕ ಉತ್ಪನ್ನಗಳು, ಕಸೂತಿ ಸಿದ್ಧ ಉಡುಪುಗಳು ಹಾಗೂ ಇನ್ನಿತರೆ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಕಲ್ಪಿಸುವ ಸಂಬAಧ ೨೫ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೮೦೭೩೮೭೯೧೬೬/ ೭೬೭೬೫೪೭೮೦೩ನ್ನು ಸಂಪರ್ಕಿಸಬಹುದಾಗಿದೆ.

You May Also Like