ಫೆ.೧೭ರಂದು ವಿದ್ಯುತ್ ಅದಾಲತ್ ಹಾಗೂ ಗ್ರಾಹಕರ ಸಂವಾದ ಸಭೆ

ತುಮಕೂರು ವಿಭಾಗ ವ್ಯಾಪ್ತಿಯ ಈ ಕೆಳಕಂಡ ಗ್ರಾಮಗಳಲ್ಲಿ ಫೆ.೧೭,೨೦೨೩ರಂದು ಬೆಳಗ್ಗೆ ೧೧ ಗಂಟೆಗೆ ವಿದ್ಯುತ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಊರುಕೆರೆ ಗ್ರಾಮ ಪಂಚಾಯಿತಿಯ ಮರಳೇನಹಳ್ಳಿ ಗೋಮಾಳ, ಕೆ. ಪಾಲಸಂದ್ರ ಗ್ರಾಮ ಪಂಚಾಯಿತಿಯ ಮಂಚಗೊAಡನಹಳ್ಳಿ, ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯಿತಿಯ ಜನುಪನಹಳ್ಳಿ, ದೇವಲಾಪುರ ಗ್ರಾಮ ಪಂಚಾಯಿತಿಯ ಬಿಟ್ಟನಕುರಿಕೆ, ಮಲ್ಲಸಂದ್ರ ಗ್ರಾಮ ಪಂಚಾಯಿತಿಯ ಹಾಲನೂರು, ಇರಕಸಂದ್ರ ಗ್ರಾಮ ಪಂಚಾಯಿತಿಯ ಇರಕಸಂದ್ರ ಮತ್ತು ಪೆದ್ದನಹಳ್ಳಿ ಗ್ರಾಮ ಪಂಚಾಯಿತಿಯ ಪೆಂಡಾರನಹಳ್ಳಿ ಗ್ರಾಮಗಳಲ್ಲಿ ಫೆ.೧೭ ರಂದು ಬೆಳಗ್ಗೆ ೧೧ ಗಂಟೆಗೆ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹಾಗೂ ಅಂದೇ ಮಧ್ಯಾಹ್ನ ೩.೩೦ಕ್ಕೆ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಿದ್ದು ಗ್ರಾಹಕರು ವಿದ್ಯುತ್‌ಗೆ ಸಂಬAಧಪಟ್ಟ ಯಾವುದೇ ಕುಂದು-ಕೊರತೆಗಳಿದ್ದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಗೆಹರಿಸಿಕೊಳ್ಳಬಹುದೆಂದು ತುಮಕೂರು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like