ಯೂಟ್ಯೂಬ್ CEO ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸುಸಾನ್ ಘೋಷಿಸಿದ್ದಾರೆ. ಗೂಗಲ್ ನಲ್ಲಿ ಸುಮಾರು 25 ವರ್ಷ ಕೆಲಸ ಮಾಡಿದ ನಂತರ, ಸುಸಾನ್ ಯೂಟ್ಯೂಬ್ ನಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಕುಟುಂಬ ಆರೋಗ್ಯ ಮತ್ತು ವೈಯಕ್ತಿಕ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಪ್ರಸ್ತುತ ಮುಖ್ಯ ಉತ್ಪನ್ನ ಅಧಿಕಾರಿಯಾಗಿರುವ ಭಾರತೀಯ-ಅಮೆರಿಕ ನೀಲ್ ಮೋಹನ್ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇವರೇ ಯೂಟ್ಯೂಬ್ ಗೆ ಹೊಸ ಬಾಸ್ ಯೂಟ್ಯೂಬ್ ನೂತನ ಮುಖ್ಯಸ್ಥ ಮತ್ತು ಹಿರಿಯ ಉಪಾಧ್ಯಕ್ಷರಾಗಿ ಭಾರತೀಯ ಸಂಜಾತ ನೀಲ್ ಮೋಹನ್ ನೇಮಕವಾಗಿದ್ದಾರೆ. ಯೂಟ್ಯೂಬ್ CEO ಸ್ಥಾನದಿಂದ ಕೆಳಗಿಳಿಯುವುದಾಗಿ ಸುಸಾನ್ ವೊಜ್ಸಿಕಿ ಘೋಷಿಸಿದ ಬಳಿಕ ನೀಲ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಓದಿರುವ ನೀಲ್ ಮೋಹನ್, ಈ ಹಿಂದೆ ಅಕ್ಸೆಂಚರ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿದರು. ಕಳೆದ ಏಳು ವರ್ಷಗಳಿಂದ ಯೂಟ್ಯೂಬ್ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.