ಚೆಸ್ ಗ್ರ್ಯಾಂಡ್ ಮಾಸ್ಟರ್ ಆದ ಚೆನ್ನೈನ ಸಹೋದರರು

ಚೆನ್ನೈ: ಭಾರತದ ಚೆಸ್ ಆಟಗಾರರಾದ ವಿಜ್ಞೇಶ್ ಎನ್. ಆರ್.  ದೇಶದ 80ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.

ಜರ್ಮನಿಯಲ್ಲಿ ನಡೆದ 24ನೇ ನಾರ್ಡ್ ವೆಸ್ಟ್ ಕಪ್ ಟೂರ್ನಿಯಲ್ಲಿ ಜಯಗಳಿಸುವ ಮೂಲಕ 2500 ರೇಟಿಂಗ್ ಅಂಕ ತಲುಪಿದ ಚೆನ್ನೈನ ಹುಡುಗ ಗ್ರ್ಯಾಂಡ್ ಮಾಸ್ಟರ್ ಆಗಿ ಬಡ್ತಿ ಪಡೆದರು. ವಿಶೇಷ ಎಂದರೆ 2019ರಲ್ಲಿ  ವಿಜ್ಞೇಶ್ ರ ಸಹೋದರ ವಿಶಾಖ್ ಎನ್.ಆರ್. ಭಾರತದ 59ನೇ ಗ್ರಾಂಡ್ ಮಾಸ್ಟರ್ ಆಗಿದ್ದರು. ಇದೀಗ ವಿಜ್ಞೇಶ್ ಮತ್ತು ವಿಶಾಖ್ ಭಾರತದ ಮೊದಲ ಗ್ರಾಂಡ್ ಮಾಸ್ಟರ್ ಸಹೋದರರು ಎನ್ನುವ ದಾಖಲೆ ಬರೆದಿದ್ದಾರೆ.

You May Also Like