ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕನ್ನಡಿಗ ದರ್ಶನ್ ನೇಮಕ

 

ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಹಾಸನ ಜಿಲ್ಲೆಯ ಯುವ ಐಎಎಸ್ ಅಧಿಕಾರಿ ಹೆಚ್. ವಿ ದರ್ಶನ್ ರವರನ್ನು ಸರ್ಕಾರ ನೇಮಿಸಿದೆ. ಈ ಹುದ್ದೆಯಲ್ಲಿದ್ದ ಕೆಎಸ್‌ಎಂಎಸ್ ಅಧಿಕಾರಿ ಯೋಗಾನಂದರವರಿಗೆ ಸದ್ಯಕ್ಕೆ ಯಾವ ಜಾಗವನ್ನು ಕೊಟ್ಟಿಲ್ಲ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹರಳಕಟ್ಟೆ ಗ್ರಾಮದವರಾದ ದರ್ಶನ್ ಮೆಕ್ಯಾನಿಕಲ್ ಇಂಜಿನಿಯರಿAಗ್ ಪದವೀಧರರು, ದರ್ಶನ್ ಕಲ್ಬುರ್ಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ಹಾಗೂ ಕೋಲಾರ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ್ದಾರೆ. ದರ್ಶನ್ ೨೦೧೬ರಲ್ಲಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದರು.


ಶಿಕ್ಷಣ ಮತ್ತು ವೃತ್ತಿ
೭ನೇ ತರಗತಿವರೆಗೆ ಮಾತ್ರ ಕನ್ನಡ ಮಾಧ್ಯಮದಲ್ಲಿ ಓದಿದ್ದ ದರ್ಶನ್ ಇಡೀ ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದಿದ್ದಾರೆ. ಬಳ್ಳಾರಿ, ತಿಪಟೂರು ಚಿಕ್ಕಮಗಳೂರು ಹಾಗೂ ಬೆಂಗಳೂರುಗಳಲ್ಲಿ ಕ್ರಮವಾಗಿ ಪ್ರಾಥಮಿಕ, ಪ್ರೌಢಶಾಲೆ, ಡಿಪ್ಲೊಮ ಹಾಗೂ ಇಂಜಿನಿಯರಿAಗ್ ಓದಿದರು. ೨೦೦೯ರಲ್ಲಿ ೨ ವರ್ಷ ಇನ್ಫೋಸಿಸ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ನಂತರ ಅಮೇರಿಕಾದಲ್ಲಿ ೩ ವರ್ಷ ನೌಕರಿ ಮಾಡಿದರೂ ಐಎಎಸ್ ಹಂಬಲ ಇವರನ್ನು ತಾಯ್ನಾಡಿಗೆ ಕರೆತಂದಿತು. ತುಮಕುರು ಮಹಾನಗರ ಪಾಲಿಕೆಗೆ ಪೂರ್ಣಾವಧಿ ಐಎಎಸ್ ಅಧಿಕಾರಿಯೊಬ್ಬರ ಅವಶ್ಯಕತೆ ಇತ್ತು ಎಂದು ಪ್ರಜ್ಞಾವಂತ ನಾಗರೀಕರ ಅಂದುಕೊಳ್ಳುತ್ತಲೇ ಇದ್ದರೂ ಸದ್ಯ ದರ್ಶನ್ ಇಲ್ಲಿ ಆಯುಕ್ತರಾಗಿ ಕರ್ತವ್ಯ ವರದಿ ಮಾಡಿಕೊಳ್ಳಲಿ ಎಂಬುದು ತುಮಕೂರು ಜನರ ಆಶಯವಾಗಿದೆ.

You May Also Like