ವಿಕಲ ಚೇತನರ ವಾಹನಕ್ಕೆ ತೆರಿಗೆ ವಿನಾಯಿತಿ

ಬೆಂಗಳೂರು: ವಿಕಲಚೇತನರ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈಕುರಿತು ಕಾರ್ಯಾಧ್ಯಕ್ಷ ಚಂದ್ರಶೇಖರ್ ಪುಟ್ಟಪ್ಪ ಮಾಡಿದ ಮನವಿಗೆ ಸ್ಪಂದಿಸಿದ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿ ವಾಹನವನ್ನು ಅಂಗವಿಕಲರು ಚಲಾಯಿಸುವಂತೆ ಮಾರ್ಪಾಡು ಮಾಡಿರಬೇಕು. ಇಲ್ಲವೆ ಮಾರ್ಪಾಡು ಮಾಡದೆಯೇ ಅಂಗವಿಕಲರು ವಾಹನ ಚಲಾಯಿಸಿದರೂ ಇಲ್ಲವೇ ಅವರೊಂದಿಗೆ ಇರುವವರು ಚಲಾಯಿಸಿದರೂ ರಿಯಾಯಿತಿಯೊಂದಿಗೆ ನಿಯಮಾನುಸಾರ ವಾಹನ ನೊಂದಣಿ ಮಾಡಿಕೊಡಬೇಕು ಎಂದು ಹೇಳಿತು. ಆದರೂ ರಾಜ್ಯದಲ್ಲಿ ಆರ್‌ಟಿಓ ಅಧಿಕಾರಿಗಳು ತೀವ್ರ ತರಹದ ಅಂಗವಿಕಲತೆಯಿAದ ಬಳಲುವ ಅಂಗವಿಕಲರು ವಾಹನ ಚಲಾಯಿಸಲಾಗದ ಕಾರಣ ವಾಹನ ಮಾರ್ಪಾಡಿನೊಂದಿಗೆ ಚಾಲಕನನ್ನು ನೇಮಿಸಿಕೊಂಡರೆ ಅಂತಹ ವಾಹನಗಳಿಗೆ ರಿಯಾಯಿಯಲ್ಲಿ ನೊಂದಣಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಚಂದ್ರಶೇಖರ್ ಪುಟ್ಟಪ್ಪ ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಸಾರಿಗೆ ಇಲಾಖೆ, ಅಂಗವಿಕಲ ಹಿದೃಷ್ಟಿಯಿಂದ ವಾಹನವನ್ನು ಮಾರ್ಪಾಡು ಮಾಡದೆ ಚಾಲಕರನ್ನು ನೇಮಿಸಿಕೊಂಡು ವಾಹನ ಬಳಸುವ ಅಂಗವಿಕಲರ ನೊಂದಣಿ ನಿರಾಕರಿಸದೆ ಜೀವಿತಾವಧಿ ರಸ್ತೆ ತೆರಿಗೆ ರಿಯಾಯಿತಿಯೊಂದಿಗೆ ನೊಂದಣಿ ಮಾಡಿ ಕೊಡಬೇಕು ಎಂದು ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದೆ.

You May Also Like