ಸೌದಿಯಲ್ಲಿ ವಿಶ್ವದ ಅತಿ ಬೃಹತ್ ಗಾತ್ರದ ಕಟ್ಟಡ

ತೈಲೇತರ ಆದಾಯ, ನೌಕರಿ ಸೃಷ್ಠಿಗೆ ಸೌದಿ ಯೋಜನೆ.
ತೈಲೋತ್ಪನ್ನದ ಅದಾಯಗಳ ಮೇಲೆ ಅವಲಂಬಿತವಾಗಿರುವ ಸೌಧಿ ಅರೆಬೀಯಾ ತೈಲೇತ್ತರ ಆದಾಯಗಳಿಗೂ ಒತ್ತು ನೀಡಲು ಒಂದು ಮೆಗಾ ಕಟ್ಟದ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಸೈದಿ ಅರೇಬಿಯಾದ ರಾಜ್ಯಧಾನಿ ರಿಯಾದ್ ನ ಕೇಂದ್ರ ಭಾಗವನ್ನು ಜಾಗತಿಕ ಮಹಾನಗರವನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.
ಕಳೆದ ವರ್ಷವಷ್ಟೇ ೧೦೦ ಮೈಲು ಉದ್ದದ ಗಗನ ಚುಂಬಿ ಕಟ್ಟಡವನ್ನು ನಿರ್ಮಾಣ ಮಡುವುದಾಗಿ ಸೌದಿ ಘೋಶಿಸಿತ್ತು ಅದರ ಬೆನ್ನಲ್ಲೆ ಸೌದಿ ಅರೇಬಿಯದ ಯುವ ರಾಜ ಮೊಹಮ್ಮದ ಬಿನ್ ಸಲ್ಮಾನ್ ಅಧುನಿಕ ಕಟ್ಟಡ ಯೋಜನೆ ಯನ್ನು ಘೋಶಿಸಿದ್ದಾರೆ.
ನ್ಯ ಮುರಬ್ಬ ಎಂಬ ಹೊಸ ನಗರದಲ್ಲಿ ಜೀವನ ಹಾಗೂ ಉದ್ಯೋಗ ಹಾಗೂ ಮನರಂಜನೆಗೆ ಬೇಕದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ.
ರಿಯಾದ್ ನ ವಾಯುವ್ಯ ದಿಕ್ಕಿನಲ್ಲಿರುವ ಕಿಂಗ್ ಸಲ್ಮಾ ಹಗೂ ಕಿಂಗ್ ಕಾಲೀದ್ ರಸ್ತೆಗಳು ಸಂದಿಸುವ ಜಾಗದಲ್ಲಿ  ೧೯ ಚ.ಕೀ.ಮಿ ನಷ್ಟು ವಿಶಾಲ ಪ್ರದೇಶದಲ್ಲಿ ಹೊಸ ನಗರ ತಲೆ ಎತ್ತಲಿದ್ದು ಲಂಕ್ಷಾAತರ ಜನಗಳಿಗೆ ಆಶ್ರಯ ಕಲ್ಪಿಸಲಿದೆ ೨೦೩೦ ಕ್ಕೆ ಈ ನಗರ ಪೂರ್ಣ ಗೊಳ್ಳಲಿದೆ. ಈ ನಗರದಿಂದ ೪ ಲಕ್ಷ ಕೋಟಿ ರೂ ಆದಾಯ ಹಗೂ ೩.೩೪ ಲಕ್ಷ ನೇರ ಪರೋಕ್ಷ ಉದ್ಯೋಗದ ನಿರೀಕ್ಷೆಯನ್ನು ಸೌದಿ ಅರೇಬಿಯಾ ಮಾಡುತ್ತಿದೆ.
ಇದರಲ್ಲಿ ಏನೇನಿದೆ?
• ೧೫ ನಿಮಿಷದಲ್ಲಿ ಮನರಂಜನಾ ಸ್ಥಳಕ್ಕೆ ನಡೆದು ತಲುಪಬಹುದು.
• ಆಂತರಿಕ ಸಾರಿಗೆ ವ್ಯವಸ್ಥೆ ಇಲ್ಲಿ ಉಂಟು, ಏರ್‌ಪೋರ್ಟ್ ನಿಂದ ಬರೀ ೨೦ ನಿಮಿಷ
• ತಲಾ ೪೦೦ ಮೀ ಎತ್ತರ, ಅಗಲ ಉದ್ದದ ವಿಶ್ವದ ಅತೀ ದೊಡ್ಡ ಕಟ್ಟಡವು ಇರತ್ತೆ.
• ೧ ಲಕ್ಷ ಮನೆ ೯೦೦೦ ಸಾವಿರ ಹೊಟೇಲ್ ರೂಂ ಹಾಗೂ ವಾಣಿಜ್ಯ ಕಚೇರಿ ಸ್ಥಳಗಳು ಹಗೂ ಇನ್ನಿತರ ವ್ಯವಸ್ಥೆಗಳು ಇರಲಿವೆ.
• ವಸತಿ ಉದ್ಯೋಗ ಮನರಂಜನೆಗೆ ಹೇಳಿ ಮಾಡಿಸಿದ ಜಾಗತಿಕ ನಗರ ಆಗಲಿದೆ.
ಕಟ್ಟಡದ ವೈಶಿಷ್ಟö್ಯ
ನ್ಯೂ ಮುರಬ್ಬ ದಲ್ಲಿ ೧ ಲಕ್ಷ ವಸತಿಗಳು ೯ ಸಾವಿರ ಹೊಟೇಲ್‌ಗಳು ರೂಂಗಳು ೯.೮ ಲಕ್ಷ ಚಿಲ್ಲರೆ ವಹಿವಾಟು, ೧೪ ಲಕ್ಷ ಚ.ಮೀ ಕಚೇರಿ ಸ್ಥಳಾವಕಾಶ ಹಾಗೂ ೧೮ ಲಕ್ಷ ಚ.ಮೀ ಸಮುದಾಯ ಸೌಲಭ್ಯವಿರುತ್ತದೆ. ಹಸಿರು ವಲಯ ಪಾದಚಾರಿ ಸೈಕಲ್ ಮಾರ್ಗ ವಳಗೂಂಡ ಸುಸ್ಥಿರ ಕಲ್ಪನೆಯಲ್ಲಿ ಈ ನಗರ ನಿರ್ಮಾಣಗೂಳ್ಳಲಿದೆ ಒಂದು ಮ್ಯಸಿಯಂ ತಂತ್ರಜ್ಞಾನ ಹಗೂ ವಿನ್ಯಾಸ ವಿಶ್ವವಿದ್ಯಾಲಯ ಬಹು ಉದ್ದೇಶದ ತಿಯೇಟರ್ ೮೦ ಕ್ಕೂ ಹೆಚ್ಚು ಮನರಂಜನ ಹಾಗೂ ಸಾಂಸ್ಕೃತಿಕ ತಾಣಗಳು ಇರಲಿವೆ ಈ ನಗರದಲ್ಲಿ ಮುಕಾಬ್ ಎಂಬ ಹೆಗ್ಗುರುತು ಕೂಡ ಇರಲಿದೆ. ಇದು ೪೦೦ ಮೀ ಏತ್ತರ, ೪೦೦ ಮೀ ಅಗಲ, ೪೦೦ ಮೀ ಉದ್ದ ಇರಲಿದೆ. ಮುರಬ್ಬ ನಗರದಲ್ಲಿ ಉದ್ಯೋಗ ವಸತಿ ಹಾಗೂ ಮನರಂಜನ ತಾಣಗಳನ್ನು ೧೫ ನಿಮಿಷದಲ್ಲಿ ನಡೆದುಕೊಂಡು ತಲುಪಬಹುದು. ಇದರ ಜೊತೆಗೆ ಆಂತರಿಕ ಸಾರಿಗೆ ವ್ಯವಸ್ಥೆ ಇರಲಿದೆ.

You May Also Like