ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಫೆಬ್ರವರಿ ೨೨, ೨೦೨೩ರಿಂದ ಮಾತಾ ರೆಸಿಡೆನ್ಸಿ ಆವರಣ, ಕೆ.ಬಿ. ಕ್ರಾಸ್, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇಲ್ಲಿ ಜಿಲ್ಲೆಯ ಸ್ವಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸುತ್ತಿರುವ ವಸ್ತುಗಳ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಈ ಮಾರಾಟ ಮೇಳದಲ್ಲಿ ಸರ್ವರಿಗೂ ಉದ್ಯೋಗ ಘೋಷಣೆಯಡಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ವತಿಯಿಂದ ಉದ್ಯೋಗ ಮೇಳವನ್ನು ಫೆಬ್ರವರಿ ೨೨ರಂದು ಬೆಳಿಗ್ಗೆ ೯ ಗಂಟೆಯಿAದ ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳು ಹಾಗೂ ಸ್ಥಳೀಯ ಸಿದ್ಧ ಉಡುಪು ಕಂಪನಿಗಳಾದ ಮ್ಯಾಪ್ ಕ್ಲಾತಿಂಗ್, ಜಾಕಿ (ಪೇಜ್ ಇಂಡಸ್ಟಿçÃಸ್) ಹಾಗೂ ಗೋಕಲ್‌ದಾಸ್ ಭಾಗವಹಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐ.ಟಿ.ಐ., ಡಿಪ್ಲೋಮಾ, ಬಿ.ಇ ತೇರ್ಗಡೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗಮೇಳದಲ್ಲಿ ವಿದ್ಯಾರ್ಹತೆ ದಾಖಲಾತಿ, ರೆಸ್ಯೂಮ್/ ಸ್ವ-ವಿವರ, ಭಾವಚಿತ್ರದ ೫ ಪ್ರತಿಗಳೊಂದಿಗೆ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೯೮೪೪೭೩೪೯೪೩, ೯೪೪೮೩೦೮೩೯೫, ೯೪೪೮೩೦೮೫೦೧ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.