ಫೆ.೨೭ರಂದು ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆ ಸಭೆ

ಕರ್ನಾಟಕ ಲೋಕಾಯುಕ್ತ ವತಿಯಿಂದ ತುಮಕೂರು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಫೆಬ್ರವರಿ ೨೭ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಏರ್ಪಡಿಸಲಾಗಿದೆ.
ಸದರಿ ಸಭೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಇತ್ಯರ್ಥವಾಗದೆ ಇರುವ ಅರ್ಜಿಗಳ ಬಗ್ಗೆ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಲಾಗುವುದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಮೀನು ಖರೀದಿ: ಆಕ್ಷೇಪಣೆ ಸಲ್ಲಿಸಲು ಮನವಿ

ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮವು ತುಮಕೂರು ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಲು ಗುರಿ ನಿಗಧಿಪಡಿಸಿದ್ದು, ಭೂ ಮಾಲೀಕರಿಂದ ಬಂದAತಹ ಜಮೀನುಗಳನ್ನು ಖರೀದಿಸಿ ನಿಗಮದ ನಿಯಮಾನುಸಾರ ಅರ್ಜಿ ಸಲ್ಲಿಸಿ ಅರ್ಹ ಪರಿಶಿಷ್ಟ ಜಾತಿಯ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರ ಫಲಾಪೇಕ್ಷೆಗಳಿಗೆ ಮಂಜೂರು ಮಾಡಬೇಕಾಗಿರುತ್ತದೆ.
ಸಿ. ಮಂಜುನಾಥರೆಡ್ಡಿ ಬಿನ್ ಸಿ.ರಾಮಕೇಶವರೆಡ್ಡಿ, ಬೆಟ್ಟದ ಕೆಳಗಿನಹಳ್ಳಿ, ಪಾವಗಡ ತಾಲ್ಲೂಕು(ಸರ್ವೆ ನಂ.೧೧೬/೧ ೧೩.೦೦ ಖುಷ್ಕಿ) ಇವರ ಜಮೀನುಗಳನ್ನು ಖರೀದಿಸಲು ಏನಾದರೂ ಲೋಪದೋಷಗಳು ಇದ್ದಲ್ಲಿ ೭ ದಿನಗಳೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ತುಮಕೂರು ಇವರಿಗೆ ಲಿಖಿತ ರೂಪದಲ್ಲಿ ನೀಡಲು ಕೋರಲಾಗಿದೆ.

You May Also Like