ರಾಜ್ಯದಲ್ಲಿ ೧೫೦ ಕ್ರೆöÊಸ್ತ ಸಮುದಾಯ ಭವನ ನಿರ್ಮಾಣ –ಜೆ.ಕೆನಡಿ

ಕ್ರೆöÊಸ್ತ ಸಮುದಾಯದ ದುರ್ಬಲ ವರ್ಗದವರು ಮದುವೆ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸಲು ಅನುವಾಗುವಂತೆ ರಾಜ್ಯದಲ್ಲಿ ೨೦೧೧ ರಿಂದ ಈವರೆಗೂ ಸುಮಾರು ೧೫೦ ಹೊಸ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಕ್ರೆöÊಸ್ತ ಅಭಿವೃದ್ದಿ ಸಮಿತಿ(ಕೆಸಿಡಿಸಿ) ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್ ಅವರು ತಿಳಿಸಿದರು.
ಪತ್ರಿಕಾ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲೇ ಸುಮಾರು ೮೫ ಸಮುದಾಯ ಭವನ ಸೇರಿದಂತೆ ರಾಜ್ಯದಲ್ಲಿ ೧೫೦ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಕ್ರೆöÊಸ್ತ ಸಮುದಾಯದ ಬಡವರ್ಗದವರಿಗೆ ಕಡಿಮೆ ಬಾಡಿಗೆ ದರವನ್ನು ನಿಗಧಿಪಡಿಸಿ ಸಮುದಾಯ ಭವನವನ್ನು ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರಲ್ಲದೆ, ಸಮುದಾಯ ಭವನ ನಿರ್ಮಾಣಕ್ಕಾಗಿ ನಗರ ಪ್ರದೇಶದಲ್ಲಿ ೧ ಕೋಟಿ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ ೫೦ಲಕ್ಷ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.


ಕ್ರೆöÊಸ್ತ ಅಭಿವೃದ್ಧಿ ಸಮಿತಿಯು ೨೦೧೧ರಲ್ಲಿ ರಚನೆಯಾಗಿದ್ದು, ಸಮಿತಿ ರಚನೆಯಾದ ಪ್ರಾರಂಭದಲ್ಲಿ ೫೦ ಕೋಟಿ ರೂ.ಗಳ ಅನುದಾನ ಲಭ್ಯವಿತ್ತು. ಪ್ರಸ್ತುತ ೨೦೦ ಕೋಟಿ ರೂ.ಗಳ ಅನುದಾನ ಲಭ್ಯವಿದೆ. ಕ್ರೆöÊಸ್ತ ಸಮುದಾಯದ ಅಭಿವೃದ್ಧಿಗಾಗಿ ಈ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. ಇದರಿಂದ ಪರಿಣಾಮಕಾರಿಯಾಗಿ ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.
ಕ್ರೆöÊಸ್ತ ಸಮುದಾಯದ ಅಭಿವೃದ್ಧಿಗೆ ಸಂಬAಧಿಸಿದAತೆ ಈಗಾಗಲೇ ರಾಜ್ಯದ ೨೫ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಫಲಾನುಭವಿಗಳ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಮಾಹಿತಿ ಕೊರತೆಯಿಂದ ಕೆಲ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ದೊರೆತಿರುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಶಿಬಿರಗಳನ್ನು ಸಮಿತಿಯಿಂದ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎನ್ನುವ ಸರ್ಕಾರದ ಧ್ಯೇಯದಂತೆ ಕ್ರೆöÊಸ್ತ ಸಮುದಾಯದ ಸಬಲೀಕರಣಕ್ಕಾಗಿ ನ್ಯಾಯಬದ್ಧ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದರಲ್ಲದೆ, ನಿರ್ವಹಣೆ ಇಲ್ಲದೆ ಶಿಥಿಲ ಸ್ಥಿತಿ ತಲುಪಿದ್ದ ಸುಮಾರು ೩೦೦ ವರ್ಷ ಹಳೆಯ ಚರ್ಚ್ಗಳ ನವೀಕರಣ/ ದುರಸ್ತಿಗಾಗಿ ಅನುದಾನವನ್ನು ಬಳಕೆ ಮಾಡಲಾಗಿದ್ದು, ಪ್ರಸ್ತುತ ದುರಸ್ತಿಯಾದ ಚರ್ಚ್ಗಳು ಸಮುದಾಯದ ಧಾರ್ಮಿಕ ಬೇಡಿಕೆಗಳನ್ನು ಈಡೇರಿಸುತ್ತಿವೆ ಎಂದು ತಿಳಿಸಿದರು.
ಕ್ರೆöÊಸ್ತ ಸಮುದಾಯದ ಸಂಘ ಸಂಸ್ಥೆಗಳಡಿ ನಡೆಯುತ್ತಿರುವ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಕ್ರೆöÊಸ್ತ ಅಭಿವೃದ್ಧಿ ಸಮಿತಿಯಿಂದ ಆಡಳಿತಾತ್ಮಕ ವೆಚ್ಚವಾಗಿ ವಾರ್ಷಿಕ ಗರಿಷ್ಟ ೧೫ಲಕ್ಷ ರೂ.ಗಳ ಅನುದಾನವನ್ನು ನೀಡಲಾಗುತ್ತಿದೆ. ರಾಜ್ಯದ ೪೫ಕ್ಕೂ ಹೆಚ್ಚು ಅನಾಥಾಶ್ರಮ ಹಾಗೂ ೫೦ಕ್ಕೂ ಹೆಚ್ಚು ವೃದ್ಧಾಶ್ರಮಗಳು ಈ ಸೌಲಭ್ಯವನ್ನು ಪಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಕ್ರೆöÊಸ್ತ ಸಂಘ ಸಂಸ್ಥೆಗಳ ಅಧೀನದಲ್ಲಿರುವ ಸ್ಮಶಾನ ಭೂಮಿ ಒತ್ತುವರಿಯಾಗುವುದನ್ನು ತಡೆಗಟ್ಟುವ ಸಲುವಾಗಿ ಆವರಣ ಗೋಡೆ ನಿರ್ಮಾಣಕ್ಕಾಗಿ ವೆಚ್ಚಕ್ಕನುಗುಣವಾಗಿ ಗರಿಷ್ಟ ೪೦ಲಕ್ಷ ರೂ.ಗಳನ್ನು ಒದಗಿಸಲಾಗುತ್ತಿದೆಯಲ್ಲದೆ, ಚರ್ಚ್ಗಳ ಆವರಣ ಗೋಡೆ ನಿರ್ಮಾಣಕ್ಕೂ ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಈಗಾಗಲೇ ವಿದೇಶಿ ವ್ಯಾಸಂಗಕ್ಕಾಗಿ ಗುರುತಿಸಲಾಗಿರುವ ೫೦೦ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಕ್ರೆöÊಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ತಲಾ ೨೦ಲಕ್ಷ ರೂ.ಗಳ ವಿದ್ಯಾರ್ಥಿವೇತನ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಕ್ರೆöÊಸ್ತ ಅಭಿವೃದ್ಧಿ ಸಮಿತಿಯ ಅನುದಾನವನ್ನು ಬಳಸಿಕೊಂಡು ಚರ್ಚ್, ವೃದ್ಧಾಶ್ರಮ, ಅನಾಥಾಶ್ರಮ, ಸಮುದಾಯ ಭವನಗಳು, ಅಭಿವೃದ್ಧಿ ಹೊಂದಿವೆ ಎಂದು ತಿಳಿಸಿದರಲ್ಲದೆ, ೨೦೧೩ ರಿಂದ ೨೦೨೨ರವರೆಗೆ ಜಿಲ್ಲೆಯ ತುಮಕೂರು ತಾಲ್ಲೂಕು ಕ್ಯಾತ್ಸಂದ್ರದ ನ್ಯೂ ಲೈಫ್ ಫಿಲೋಶಿಪ್ ಚರ್ಚ್, ಗಾಂಧಿ ನಗರದ ಅವರ್ ಲೇಡಿ ಆಫ್ ರೋಸರಿ ಕಾನ್ವೆಂಟ್, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ತಿಪಟೂರು ತಾಲ್ಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ಚರ್ಚ್ಗಳ ನವೀಕರಣಕ್ಕಾಗಿ ೮೦ಲಕ್ಷ ರೂ.; ತಿಪಟೂರು ತಾಲ್ಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ದೇವಾಲಯ ವ್ಯಾಪ್ತಿಯ ಸ್ಮಶಾನ ಗೋಡೆ ನಿರ್ಮಾಣಕ್ಕಾಗಿ ೯ಲಕ್ಷ ರೂ.; ತುಮಕೂರು ತಾಲ್ಲೂಕು ಗೆದ್ದಲಹಳ್ಳಿಯಲ್ಲಿ ಹೆಚ್‌ಐವಿ/ಏಡ್ಸ್ ಬಾಧಿತರ ಆರೈಕೆ ಮಾಡುತ್ತಿರುವ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಯ ನಿರ್ವಹಣೆಗಾಗಿ ೪.೮೪ಲಕ್ಷ ರೂ.; ಕುಣಿಗಲ್ ತಾಲ್ಲೂಕು ವಾಣಿಗೆರೆಯಲ್ಲಿ ಅನಾಥ ಮಕ್ಕಳ ಆರೈಕೆ ಮಾಡುತ್ತಿರುವ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಗೆ ೧೦.೯೭ಲಕ್ಷ ರೂ ಹಾಗೂ ನಗರದ ಸಿ.ಎಸ್.ಐ. ವೆಸ್ಲಿ ಚರ್ಚ್ ದೇವಾಲಯ ವ್ಯಾಪ್ತಿಯ ಸ್ಮಶಾನ ಆವರಣ ಗೋಡೆ ಅಭಿವೃದ್ಧಿ ಕಾಮಗಾರಿಗಾಗಿ ೨೦ಲಕ್ಷ ರೂ. ಸೇರಿದಂತೆ ೧.೨೪ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಕ್ರೆöÊಸ್ತರ ಅಭಿವೃದ್ಧಿ ಯೋಜನೆಯಡಿ ಕುಣಿಗಲ್ ತಾಲ್ಲೂಕು ವಾಣಿಗೆರೆಯಲ್ಲಿ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಯ ಸಮುದಾಯ ಭವನ ನಿರ್ಮಾಣಕ್ಕಾಗಿ ೪೫ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೇರ್ ಕರಂಗಿ ಮಾತನಾಡಿ, ಶೀಘ್ರದಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು.
ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಅಲೀಮುಲ್ಲಾ ಹಾಜರಿದ್ದರು.

You May Also Like