ಪಾವಗಡ: ಸರ್ಕಾರಿ ಆದರ್ಶ ವಿದ್ಯಾಲಯ ೬ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನ

ತುಮಕೂರು: ಪಾವಗಡ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಗೆ ೨೦೨೩-೨೪ನೇ ಸಾಲಿನ ೬ನೇ ತರಗತಿಯ ದಾಖಲಾತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿಸಲಾಗಿದೆ.
ಪಾವಗಡ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳಲ್ಲಿ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಯ ಜಾತಿ/ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, SಂಖಿS ನಂಬರ್, ದೂರವಾಣಿ ಸಂಖ್ಯೆ, ಅಂಗವಿಕಲರಾಗಿದ್ದಲ್ಲಿ ಅಂಗವೈಕಲ್ಯ ಪ್ರಮಾಣ ಪತ್ರ, ಪಾವಗಡ ತಾಲೂಕಿನ ನಿವಾಸಿಗಳಾಗಿದ್ದು ಬೇರೆಕಡೆ ವಿದ್ಯಾಬ್ಯಾಸ ಮಾಡುತ್ತಿದ್ದಲ್ಲಿ ವಾಸಸ್ಥಳ ಧೃಡೀಕರಣ ಪತ್ರದ ಜೊತೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ www.schooleducation.kar.nic.in ಅಥವಾ www.vidyavahini.karnataka.gov.in ನ ಜಾಲತಾಣ ಮೂಲಕ ಅರ್ಜಿಯನ್ನು ಫೆಬ್ರವರಿ ೧೮ ರಿಂದ ಮಾರ್ಚ್ ೪ರವರೆಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೪೮೦೨೩೪೭೮೯ ಹಾಗೂ ೯೪೮೦೬೯೫೩೫೭ನ್ನು ಸಂಪರ್ಕಿಸಬೇಕೆAದು ಸರ್ಕಾರಿ ಆದರ್ಶ ವಿದ್ಯಾಲಯ ಮುಖ್ಯಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like