ಫೆ.೨೩ ರಿಂದ ೩ ದಿನಗಳ ರಾಷ್ಟಿçÃಯ ಸಮ್ಮೇಳನ

ತುಮಕೂರು(ಕ.ವಾ) ಫೆ.೨೨: ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇಂಡಿಯನ್ ಸೊಸೈಟಿ ಆಫ್ ಪ್ರೋಪೆಷನಲ್ ಸೋಷಿಯಲ್ ವರ್ಕ್ನ ಸಹಯೋಗದಲ್ಲಿ ಫೆಬ್ರವರಿ ೨೩ ರಿಂದ ೨೫ರವರೆಗೆ ತುಮಕೂರು ವಿಶ್ವವಿದ್ಯಾನಿಲಯದ ಡಾ: ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ “ಶಿಕ್ಷಣದಲ್ಲಿ ಸಮಾಜಕಾರ್ಯ” ವಿಷಯ ಕುರಿತು ೩ ದಿನಗಳ ಕಾಲ ರಾಷ್ಟಿçÃಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ ೨.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ಅವರು ಉದ್ಘಾಟಿಸುವರು. ಪ್ರಾಥಮಿಕ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅವರು ಅಧ್ಯಕ್ಷತೆವಹಿಸುವರು. ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ನಿಮ್ಹಾನ್ಸ್ ವಿಶ್ರಾಂತ ಪ್ರಾಧ್ಯಾಪಕ ಐ.ಎ.ಶರೀಫ್, ಪ್ರೊ. ಮುರಳಿ ದೇಸಾಯಿ, ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಹೀದ ಜಮ್ ಜಮ್ ಅವರು ಉಪಸ್ಥಿತರಿದ್ದರು.

You May Also Like