ಫೆ.೨೫ಕ್ಕೆ ವಿಜ್ಞಾನ ವಸ್ತು ಪ್ರದರ್ಶನ

ತುಮಕೂರು: ತಾಲ್ಲೂಕಿನ ಬ್ರಹ್ಮಸಂದ್ರದ ಸರ್ಕಾರಿ ಶಾಲೆಯಲ್ಲಿ ಫೆ.೨೫ರಂದು ವಿಜ್ಞಾನ ವಸ್ತು ಪ್ರದರ್ಶನವನ್ನು ಸಹಕಾರ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿತ್ತು. ವಸ್ತು ಪ್ರದರ್ಶನಕ್ಕೆ ಶಾಲಾ ಮಕ್ಕಳಿಗೆ ಅಗತ್ಯ ಮಾಹಿತಿ ಹಾಗೂ ತರಬೇತಿಯನ್ನು ನೀಡುವ ಮೂಲಕ ವಸ್ತು ಪ್ರದರ್ಶನಕ್ಕೆ ಬೇಕಾದ ಮಾದರಿಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸಲಾಗಿದೆ. ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೩ರವರೆಗೆ ನಡೆಯಲಿದೆ. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವಂತೆ ಫೌಂಡೇಶನ್ ಅಧ್ಯಕ್ಷರಾದ ಜಿ.ಎಂ.ಅಕ್ಷಯ್ ಭಟ್, ಉಪಾಧ್ಯಕ್ಷರಾದ ಗೋಕುಲ್ ಹೆಚ್.ರಾಜ್, ಕಾರ್ಯದರ್ಶಿ ದಿನೇಶ್.ಸಿ.ಈ ಮೂಲಕ ಕೋರಿದ್ದಾರೆ.

 

You May Also Like