ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈ ಮತ್ತು ಮಾಜಿ ಕ್ರೀಡಾಪಟುಗಳಿಗೆ ಭಾರತೀಯ ಒಲಂಪಿಕ್ ಸಂಸ್ಥೆ ವೈದ್ಯಕೀಯ ವಿಮೆ ಒದಗಿಸಲು ಮುಂದಾಗಿದೆ ಒಲಂಪಿಕ್ ಭವನದಲ್ಲಿ ನಡೆದ ಭಾರತೀಯ ಒಲಂಪಿಕ್ ಸಂಸ್ಥೆಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಭವಿಷ್ಯದಲ್ಲಿ ಪದಕ ಗೆಲ್ಲಬಲ್ಲ ಸಂಭಾವ್ಯ ಕ್ರೀಡಾಪಟುಗಳಿಗೂ ವೈದ್ಯಕೀಯ ವಿಮೆ ನೀಡಲು ತೀರ್ಮಾನಿಸಲಾಗಿದೆ ವಿವಿಧ ಕ್ರೀಡೆಗಳಲ್ಲಿ ದೇಶಕ್ಕಾಗಿ ಪದಕ ಗೆದ್ದ ಹಲವಾರು ಮಾಜಿ ಕ್ರೀಡಾಪಟುಗಳು ಒಳ್ಳೆಯ ಜೀವನ ನಡೆಸುತ್ತಿಲ್ಲ ಕೆಲವರು ಆರೋಗ್ಯ ಯೋಗ ಕ್ಷೇಮ ನಿರ್ವಹಿಸಲು ಸದೃಢವಾಗಿಲ್ಲ ಹೀಗಾಗಿ ಭಾರತೀಯ ಒಲಂಪಿಕ್ ಸಂಸ್ಥೆಯು ಈ ಕ್ರೀಡಾಪಟುಗಳಿಗೆ ಉಚಿತ ವೈದ್ಯಕೀಯ ವಿಮೆ ಒದಗಿಸಲು ತೀರ್ಮಾನಿಸಿದೆ ಎಂದು ಭಾರತೀಯ ಒಲಂಪಿಕ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಜಿ ಕ್ರೀಡಾಪಟುಗಳ ಜೊತೆಗೆ ಹಾಲಿ ಮತ್ತು ದೇಶಕ್ಕಾಗಿ ಪದಕ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಸಂಭಾವ್ಯ ಕ್ರೀಡಾಪಟುಗಳಿಗೂ ಈ ಪ್ರಯೋಜನ ದೊರೆಯಲಿದೆ ಕ್ರೀಡಾಪಟುಗಳಿಗೆ ಈ ವೈದ್ಯಕೀಯ ವಿಮೆ ಒದಗಿಸಬೇಕು ಎನ್ನುವ ವಿಚಾರದಲ್ಲಿ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್ ಸಹಕಾರ ಪಡೆದು ವಿಮೆ ಮಾಡಿಸಲಿದ್ದೇವೆ ಎಂದು ಭಾರತೀಯ ಒಲಂಪಿಕ್ ಸಂಸ್ಥೆ ತಿಳಿಸಿದೆ.