ರಷ್ಯಾ ಉಕ್ರೇನ್ ಯುದ್ಧಕ್ಕೆ ವರ್ಷ

ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡ ಮುಗ್ಧರು ಮತ್ತು ಮಕ್ಕಳು 

 

 

ಭೀಕರ ಸಂಕಟ ವಿನಾಶಕ್ಕೆ ಕಾರಣವಾದ ರಷ್ಯಾ ಉಕ್ರೇನ್ ನಲ್ಲಿನ ಯುದ್ಧಕ್ಕೆ ಇಂದು ವರ್ಷದ ಕರಾಳ ನೆನಪು. ಅಪಾರ ಸಾವು ನೋವುಗಳಿಗೆ ಕಾರಣವಾಗಿದ್ದ ಉಕ್ರೇನ್ ರಷ್ಯಾ ಯುದ್ಧವು ಫೆಬ್ರವರಿ 24 2022ರಂದು ಮುಂಜಾನೆ ಆರಂಭವಾಗಿತ್ತು. ಉಕ್ರೇನ್ ನ ನಗರದ ಮೇಲೆ ರಷ್ಯಾ ಅಕ್ರಮಣವನ್ನು ನಡೆಸಿತ್ತು ಈ ಘಟನೆ ಇಡೀ ಜಗತ್ತನ್ನೇ ದಿಗ್ ಭ್ರಮೆ ಗೊಳಿಸಿತ್ತು ಕಾರು ಬಸ್ ರೈಲು ಮತ್ತು ಕಾಲ್ನಡಿಗೆಯಲ್ಲಿ ನಿರಾಶ್ರಿತರು ಉಕ್ರೇನ್ ನಿಂದ ಹೊರಹೋಗಲು ಪ್ರಾರಂಭಿಸುವ ಮೊದಲು ಯುದ್ಧವು ಪ್ರಾರಂಭವಾಯಿತು ಮಾರಿಯುಪೋಲ್ ನಾಶ ಎಲ್ಲಕ್ಕಿಂತ ಹೆಚ್ಚಾಗಿ ಒಂದು ನಗರವು ಯುದ್ಧದ ಮೊದಲ ಆರು ತಿಂಗಳುಗಳಲ್ಲಿ ದುಃಖದ ಸಂಕೇತವನ್ನು ಸೂಚಿಸಿತ್ತು ರಷ್ಯಾವು ದಕ್ಷಿಣದ ಬಂದರು ಮರಿಯೂ ಫೋನ್ ಇದು ಮೂರು ತಿಂಗಳ ಮುತ್ತಿಗೆಯಲ್ಲಿ ಸಂಪೂರ್ಣ ನಗರ ನಾಶವಾಯಿತು.

ki

ಡಾನ್ ಬಾಸ್ ಗಾಗಿ ಯುದ್ಧ:

ಉತ್ತರದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ರಷ್ಯಾ ತನ್ನ ಫೈರ್ ಪವರ್ ಅನ್ನು ಡಾನ್ ಬಾಸ್ ನ ಪೂರ್ವ ಪ್ರದೇಶದ ಮೇಲೆ ಕೇಂದ್ರೀಕರಿಸುತ್ತದೆ. ಮಿರಾಕಲ್ ಸೇತುವೆ ಸ್ಪೋಟ ಅಕ್ಟೋಬರ್ 8ರಂದು ಕೆರ್ಚ್ ಜಲಸಂಧಿ ಯಾದ್ಯಂತ ಆಕ್ರಮಿತ ಕ್ರೈಮಿಯ ಪರ್ಯಾಯ ದ್ವೀಪಕ್ಕೆ ರಷ್ಯಾದ ಮುಖ್ಯ ಭೂಭಾಗವನ್ನು ಸಂಪರ್ಕಿಸುವ ಪುಟಿನ್ ಅವರ ಪವಾಡ ಸೇತುವೆಯನ್ನು ಭಾಗಶಃ ಸ್ಪೋಟಿಸಿದಾಗ ರಷ್ಯಾದ ಪ್ರತಿಷ್ಠೆಯು ತೀರ ಹೊಡೆತವನ್ನು ನೀಡುತ್ತದೆ.

ಉಕ್ರೇನ್ ಬಿಕಟ್ಟಿನಿಂದಾಗಿ ಜಿ ಟ್ವೆಂಟಿ ಗುಂಪಿನ ಪ್ರಕ್ರಿಯೆ ಮೇಲೆ ಯತ್ತಿರಿಕ್ತ ಪರಿಣಾಮ ಉಂಟಾಗಲಿದೆ ಆದರೆ ಭಾರತದ ಅಧ್ಯಕ್ಷತೆಯಲ್ಲಿ ನಮಗೆ ನಂಬಿಕೆ ಇದೆ ಉಕ್ರೇನ್ ಬಿಕ್ಕಟ್ಟಿನ ವಿಚಾರದಲ್ಲಿ ಭಾರತವು ತಡೆದಂತಹ ಒಟ್ಟಾರೆ ನಿಲುವನ್ನು ನಾವು ಪ್ರಶಂಸಿಸುತ್ತೇವೆ ಎಂದು ಯುರೋಪಿಯನ್ ಒಕ್ಕೂಟದ ರಾಯಭಾರಿ ಯುಗೊ ಆಸ್ತುಟೊ ಹೇಳಿದ್ದಾರೆ. ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಂಡು ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದೆ ಅದರ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ ಆದರೆ ಈಗ ಬಿಕ್ಕಟ್ಟಿನ ಪೂರ್ವದಲ್ಲಿದ್ದ ದರಕ್ಕೆ ತೈಲ ಲಭ್ಯವಾಗುತ್ತಿದೆ ಇದರಿಂದ ಎಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗುತ್ತಿದೆ ಎಂದಿದ್ದಾರೆ.

ನವೀನ್ ನೆನಪು:

ಯುದ್ಧದ ವೇಳೆ ರಷ್ಯಾದ ಶೆಲ್ ದಾಳಿಯಿಂದಾಗಿ ಕರ್ನಾಟಕದ ಚಳಗೇರಿ ನಿವಾಸಿ ನವೀನ್ ಗ್ಯಾನಗೌಡ್ರ ಎಂಬ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟಿದ್ದರು ಭಾರತ ಸರ್ಕಾರದ ಹಲವು ಪ್ರಯತ್ನಗಳ ನಂತರ ನವೀನ್ ಮೃತ ದೇಹವನ್ನು ತಾಯ್ನಾಡಿಗೆ ತಂದಿದ್ದನ್ನು ಸ್ಮರಿಸಬಹುದು ಇತ್ತೀಚೆಗಷ್ಟೇ ಅವರ ಪೋಷಕರ ತಮ್ಮ ಪುತ್ರನ ಹೆಸರಿನಲ್ಲಿ ಮನೆ ನಿರ್ಮಿಸಿ ಸ್ವಂತ ಊರಿನಲ್ಲಿ ಮನೆ ಕಟ್ಟಿಸಬೇಕು ಎಂದು ಕನಸು ಹೊತ್ತಿದ್ದ ತಮ್ಮ ಮಗನ ಕನಸನ್ನು ನನಸಾಗಿಸಿದ್ದಾರೆ.

You May Also Like