ವೈದೇಹಿ ರವರಿಗೆ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ

ನೃಪತುಂಗ ಸೇರಿದಂತೆ ಐವರಿಗೆ ಮಯೂರವರ್ಮ ಸಾಹಿತ್ಯ ಪ್ರಶಸ್ತಿ  

ಕನ್ನಡದ ಜ್ಞಾನಪೀಠ ಎನಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೀಡುವ 2022ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಕಥೆಗಾರ್ತಿ ವೈದೇಹಿ ಪಾತ್ರರಾಗಿದ್ದಾರೆ ಪ್ರಶಸ್ತಿ 7 ಲಕ್ಷ ನಗದು ಪ್ರಮಾಣ ಪತ್ರ ಒಳಗೊಂಡಿದೆ. ವೈದೇಹಿ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಜಾನಕಿ ಶ್ರೀನಿವಾಸ ಮೂರ್ತಿ ಸಣ್ಣ ಕಥೆ ಕಾವ್ಯ ಕಾದಂಬರಿ ನಾಟಕ ಮಕ್ಕಳ ಸಾಹಿತ್ಯ ಅನುವಾದ ಸಾಹಿತ್ಯ ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ಅವರ ಜೀವಮಾನದ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು. ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ. ಅದೇ ರೀತಿ ಮಯೂರವರ್ಮ ಸಾಹಿತ್ಯ ಪ್ರಶಸ್ತಿಗೆ ಗಜೇಂದ್ರಗಡದ ಹನುಮಂತ ಸೋಮನ ಕಟ್ಟಿ ಕೊಟ್ಟೂರಿನ ಗುಡ್ಡಪ್ಪ ಬೆಟ್ಟಗೇರಿ ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಹಾಸನದ ಬೇಲೂರು ರಘುನಂದನ ಅವರನ್ನು ಆಯ್ಕೆ ಮಾಡಲಾಗಿದೆ ಇದು 25, 001 ರೂ. ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.

 

You May Also Like