ಸಾಂಧಬ್ರಿಕ ಚಿತ್ರ
ಜಿಲ್ಲಾಡಳಿತ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಮತ್ತು ಅನನ್ಯ Institute ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ ೧ ರಂದು ಬೆಳಿಗ್ಗೆ ೯-೩೦ ರಿಂದ ಸಂಜೆ ೪ ಗಂಟೆಯವರೆಗೆ ನಗರದ ಬಿ.ಎಚ್.ರಸ್ತೆ, ಟೌನ್‌ಹಾಲ್ ಹತ್ತಿರ, ಜಯದೇವ ಕಾಂಪ್ಲೆಕ್ಸ್ನಲ್ಲಿರುವ ಅನನ್ಯ Institute ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಬೆಂಗಳೂರು ಹಾಗೂ ತುಮಕೂರಿನ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐ.ಟಿ.ಐ., ಡಿಪ್ಲೋಮಾ, ಬಿ.ಇ ತೇರ್ಗಡೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದ ಲಿಂಕ್‌ನಲ್ಲಿ https://skillconnect.kaushalkar.com/candidatereg ನೋಂದಾಯಿಸಿಕೊ0ಡು ಭಾಗವಹಿಸಬಹುದು ಅಥವಾ ಸದರಿ ದಿನಾಂಕದ0ದು ನೇರವಾಗಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೬೨೦೨೩೦೬೯೬, ೯೮೪೪೭೩೪೯೪೩, ೯೪೪೮೩೦೮೩೯೫, ೯೪೪೮೩೦೮೫೦೧ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಶ್ರೀನಿವಾಸ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.