ತಿಪಟೂರು ತಾಲೂಕಿನಲ್ಲಿ ಸಹಾಯಧನದಡಿ ವಿವಿಧ ಕೃಷಿ ಉಪಕರಣಗಳನ್ನು ವಿತರಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಗಿ ಕ್ಲೀನಿಂಗ್ ಮಿಲ್, ಫ್ಲೋರ್ ಮಿಲ್, ಪಲ್ವರೈಸರ್, ಬೇಳೆ ಮಾಡುವ ಯಂತ್ರ, ಕಬ್ಬಿನ ಹಾಲು ತೆಗೆಯುವ ಯಂತ್ರ ಹಾಗೂ ಮೋಟಾರ್ ಚಾಲಿತ ಸಣ್ಣ ಎಣ್ಣೆ ಗಾಣಗಳ ಉಪಕರಣಗಳನ್ನು ನೀಡಲಾಗುವುದು. ಸಾಮಾನ್ಯ ವರ್ಗದವರಿಗೆ ಶೇ.೫೦ರಷ್ಟು ಸಹಾಯಧನ ಹಾಗೂ ಪ.ಜಾತಿ ಮತ್ತು ಪ.ಪಂಗಡದವರಿಗೆ ಶೇ.೯೦ರಷ್ಟು ಸಹಾಯಧನ ಸೌಲಭ್ಯ ನೀಡಲಾಗುವುದು. ಆಸಕ್ತಿ ಇರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ತಿಪಟೂರು ಸಹಾಯಕ ಕೃಷಿ ನಿದೇರ್ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.