ವಿಶ್ವ ಎನ್ ಜಿ ಓ ದಿನವನ್ನು ಫೆಬ್ರವರಿ 27ರಂದು ಪ್ರತಿವರ್ಷ ಆಚರಿಸಲಾಗುತ್ತದೆ. 2010ರಲ್ಲಿ ಕೌನ್ಸಿಲ್ ಆಫ್ ಬಾಲ್ಟಿಕ್ ಸಮುದ್ರ ರಾಜ್ಯಗಳ ಐಎಕ್ಸ್ ಬಾಲ್ಟಿಕ್ ಸಮುದ್ರ ಎನ್‌ಜಿಓ ಫೋರಮ್ ನ 12 ಸದಸ್ಯ ರಾಷ್ಟ್ರಗಳು ಅಧಿಕೃತವಾಗಿ ಗುರುತಿಸಿ ಈ ದಿನವನ್ನು ಘೋಷಿಸಲಾಯಿತು ತದನಂತರ 2014ರಲ್ಲಿ ವಿಶ್ವ ಸಂಸ್ಥೆ ಈ ಯು ರಾಷ್ಟ್ರಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಈ ದಿನವನ್ನು ಅಧಿಕೃತವಾಗಿ ಗುರುತಿಸಿವೆ.
ಎನ್ ಜಿ ಓ ದ ಹಿನ್ನೆಲೆ
ವಿಶ್ವ ಎನ್‌ಜಿಓ ದಿನದ ಪರಿಕಲ್ಪನೆಯನ್ನು ಮೊದಲಿಗೆ ಸೃಷ್ಟಿಸಿದವರು ಮಾರ್ಸಿಸ್ ಲಿಯರ್ಸ್ ಸ್ಕಡ್ಮಾನಿಸ್. ವಿಶ್ವ ಎನ್‌ಜಿಓ ದಿನವನ್ನು ಏಪ್ರಿಲ್ 17 2010 ರಂದು ಬಾಲ್ಟಿಕ್ ಸಮುದ್ರ ರಾಜ್ಯಗಳ ಕೌನ್ಸಿಲ್ ನ ಬಾಲ್ಟಿಕ್ ಸಮುದ್ರ ಎನ್ ಜಿ ಓ ಫೋರಂ ಅಧಿಕೃತವಾಗಿ ಗುರುತಿಸಿತು ಬಾಲ್ಟಿಕ್ ಸಮುದ್ರ ಎನ್ ಜಿ ಓ ವೇದಿಕೆಯ ಸದಸ್ಯ ರಾಷ್ಟ್ರಗಳು ಬೆಲಾರಸ್ ಡೆನ್ಮಾರ್ಕ್ ಎಸ್ಟೋನಿಯ ಫಿನ್ಲ್ಯಾಂಡ್ ಜರ್ಮನಿ ಐಸ್ಲ್ಯಾಂಡ್ ಲಾಟ್ರಿಯ ಲಿತುವೇನಿಯ ಪೊಲೆಂಡ್ ರಷ್ಯಾ ನಾರ್ವೆ ಮತ್ತು ಸ್ಪೀಡನ್ ರಾಷ್ಟ್ರಗಳು ಮೊದಲಿಗೆ ಅಂಗೀಕರಿಸಿದವು.
ಉದ್ದೇಶ
ಎನ್ ಜಿ ಓ ಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜನರನ್ನು ಪ್ರೇರೇಪಿಸುವುದು ಮತ್ತು ಎನ್ ಜಿ ಒ ಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಹೆಚ್ಚಿನ ಸಹಭಾಗಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಜಗತ್ತಿನ ವಿವಿಧಡೆ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒಗಳ ಕಾರ್ಯವನ್ನು ಶ್ಲಾಘಿಸುವುದು ಸ್ಮರಿಸುವುದು ಮತ್ತು ಇನ್ನೂ ಉತ್ತಮವಾಗಿ ಅವುಗಳು ಕಾರ್ಯನಿರ್ವಹಿಸಲು ಜನತೆ ಹೇಗೆ ಸಹಕರಿಸಬೇಕು ಎಂದು ತಿಳಿಸಲು ಹಾಗೂ ಎನ್ ಜಿ ಒ ಗಳ ಅವಿರತ ಶ್ರಮದಿಂದಿರುವ ಸೇವಾ ಕಾರ್ಯಕರ್ತರನ್ನು ಗುರುತಿಸುವುದು ಸಾರ್ವತ್ರಿಕ ಪರಿಕಲ್ಪನೆಯಾಗಿದೆ ವಿಶ್ವ ವಿಶ್ವ ಎನ್ ಜಿ ಓ ದಿನವು ಜಗತ್ತಿನಾದ್ಯಂತ ಎನ್ ಜಿಒಗಳಿಗೆ ಜ್ಞಾನ ಮತ್ತು ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ದಿನವಾಗಿದೆ ಎಂಜಿ ಹೋಗಲು ಮತ್ತು ಅವುಗಳ ಪ್ರಭಾವದ ಬಗ್ಗೆ ವಿಶ್ವಾಸ ವ್ಯಕ್ತಿಗಳಿಗೆ ಶಿಕ್ಷಣ ನೀಡುವ ಗುರಿ ಹೊಂದಿದೆ.