ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ಸಿದ್ಧತೆಗಾಗಿ ನೇರ ಫೋನ್ ಇನ್ ಕಾರ್ಯಕ್ರಮ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ಸಿದ್ದತೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಫೆಬ್ರವರಿ ೨೫ರಂದು ನೇರ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿಷಯವಾರು ನೂರಾರು ದೂರವಾಣಿ ಕರೆಗಳ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿ ಗುಂಪುಗಳು, ಪೋಷಕರು ಮತ್ತು ಶಿಕ್ಷಕರು ವಿಷಯಾಧಾರಿತ ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡುಕೊಳ್ಳುವ ಜೊತೆಗೆ ಅನ್ವಯಿಕ ಪ್ರಶ್ನೆಗಳನ್ನು ಉತ್ತರಿಸುವ ವಿಧಾನ, ಪರೀಕ್ಷೆಯ ಸ್ವರೂಪ, ಪ್ರಶ್ನೆಗಳ ಕಠಿಣತೆ, ಗರಿಷ್ಟ ಅಂಕ ಗಳಿಕೆಗಾಗಿ ವ್ಯವಸ್ಥಿತವಾಗಿ ಉತ್ತರಿಸುವ ಕ್ರಮ, ಸ್ಮರಣ ಶಕ್ತಿ ಅಭಿವೃದ್ಧಿ ಪಡಿಸಿಕೊಳ್ಳುವ ಯಶಸ್ವಿ ಕ್ರಮಗಳು ಮುಂತಾದ ಸಾಮಾನ್ಯ ಪ್ರಶ್ನೆಗಳನ್ನು ವ್ಯಾಪಕವಾಗಿ ಕೇಳಿ ಉತ್ತರ ಪಡೆದದ್ದಷ್ಟೇ ಅಲ್ಲದೇ “ಮೌಲ್ಯ ಮಾಪಕರನ್ನು ಸಂಪ್ರೀತಗೊಳಿಸಲು ಹೇಗೆ ಉತ್ತರಿಸಬೇಕು” ಎಂಬ ಕುತೂಹಲಕಾರಿ ಸಂದೇಹಗಳನ್ನೂ ಪ್ರಶ್ನಿಸಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಂಜಯ್ಯ, ವಿಷಯ ತಜ್ಞರಾದ ಜಗದೀಶ್, ಪಾವನ, ಗಂಗಾನಾಯಕ್, ಎನ್.ಶ್ರೀಧರ್, ಕಲಾವತಿ ಹಾಗೂ ಹೆಚ್.ಎಸ್. ವಾಣಿ ಹಾಜರಿದ್ದರು.

You May Also Like