ದೇವರಾಯನದುರ್ಗ: ಮಾ.೭ರಂದು ಬ್ರಹ್ಮರಥೋತ್ಸವ

ಇತಿಹಾಸ ಪ್ರಸಿದ್ದ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಾರ್ಚ್ ೭ ಹುಣ್ಣಿಮೆಯಂದು ಮಧ್ಯಾಹ್ನ ೧ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಕರಿಗಿರಿ ಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ ದೇವರಾಯನದುರ್ಗದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಪ್ರಯುಕ್ತ ಫೆಬ್ರವರಿ ೨೮ರಿಂದ ಮಾರ್ಚ್ ೧೨ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.೨೮ ರಂದು ಸಂಜೆ ೭ಕ್ಕೆ ಅಂಕುರಾರ್ಪಣ, ಮಾರ್ಚ್ ೧ರಂದು ಸಂಜೆ ೭.೩೦ಕ್ಕೆ ಧ್ವಜಾರೋಹಣ, ಮಾ.೨ ರಂದು ರಾತ್ರಿ ೮ಕ್ಕೆ ಶೇಷವಾಹನೋತ್ಸವ, ಮಾ.೩ರಂದು ರಾತ್ರಿ ೮ಕ್ಕೆ ಸಿಂಹಾರೋಹಣ, ಮಾ.೪ರಂದು ರಾತ್ರಿ ೮ಕ್ಕೆ ಪುಷ್ಪರಥ, ಮಾ.೫ರಂದು ರಾತ್ರಿ ೮.೩೦ಕ್ಕೆ ಪ್ರಹ್ಲಾದೋತ್ಸವ ನಂತರ ರಾತ್ರಿ ೧೨ ಗಂಟೆಗೆ ರಾಮಾನುಜಕೂಟ ಸೇವೆ ಹಾಗೂ ೧೨.೩೦ಕ್ಕೆ ಕಲ್ಯಾಣೋತ್ಸವ ನಡೆಯಲಿದೆ. ಮಾ.೬ರಂದು ಮಧ್ಯಾಹ್ನ ೧೨ಕ್ಕೆ ಗರುಡವಾಹನ, ಸಂಜೆ ೫ಕ್ಕೆ ಗಜೇಂದ್ರ ಮೋಕ್ಷ, ರಾತ್ರಿ ೮.೩೦ಕ್ಕೆ ನವಿಲು ವಾಹನ ಹಾಗೂ ರಾತ್ರಿ ೯.೩೦ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಮಾ.೮ರಂದು ಮಧ್ಯಾಹ್ನ ೧೨.೩೦ಕ್ಕೆ ಸೂರ್ಯಮಂಡಲೋತ್ಸವ, ರಾತ್ರಿ ೧೦ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ ೧೧ ಕ್ಕೆ ಅಶ್ವವಾಹನೋತ್ಸವ ಇರುತ್ತದೆ. ಮಾ.೯ರಂದು ಮಧ್ಯಾಹ್ನ ೧೨ಕ್ಕೆ ತೀರ್ಥಸ್ನಾನ, ಮಧ್ಯಾಹ್ನ೧.೩೦ಕ್ಕೆ ಉಯ್ಯಾಲೋತ್ಸವ, ರಾತ್ರಿ ೮ಕ್ಕೆ ಕುಂಭಿ ದೇವಸ್ಥಾನದಲ್ಲಿ ಧ್ವಜಾರೋಹಣ, ರಾತ್ರಿ ೯.೩೦ಕ್ಕೆ ಚಿತ್ರಗೋಪುರೋತ್ಸವ, ರಾತ್ರಿ೧೦ಕ್ಕೆ ಜಲಕ್ರೀಡೆ ಉತ್ಸವ ಜರುಗಲಿದೆ. ಮಾ.೧೦ರಂದು ರಾತ್ರಿ ೯ಕ್ಕೆ ದವನೋತ್ಸವ, ಮಾ.೧೧ರಂದು ಬೆಳಿಗ್ಗೆ ೯.೩೦ಕ್ಕೆ ಉಯ್ಯಾಲೋತ್ಸವ, ೧೦.೩೦ಕ್ಕೆ ಕುಂಭಿಬೆಟ್ಟದಲ್ಲಿ (ಪ್ರಾಕಾರೋತ್ಸವ) ಮತ್ತು ಪ್ರಸಾದ ವಿನಿಯೋಗ, ರಾತ್ರಿ ೯.೩೦ಕ್ಕೆ ಹನುಮಂತೋತ್ಸವ, ೧೦ಕ್ಕೆ ಶಯನೋತ್ಸವ ಹಾಗೂ ಮಾ.೧೨ರಂದು ಬೆಳಿಗ್ಗೆ ೯.೩೦ಕ್ಕೆ ಮಹಾಭಿಷೇಕ ಹಾಗೂ ಮಧ್ಯಾಹ್ನ ೧೨.೩೦ಕ್ಕೆ ಗರುಡೋತ್ಸವ ನಡೆಯುತ್ತದೆ.
ಫೆ.೨೮ರಿಂದ ಮಾ.೧೨ರವರೆಗೆ ರಥೋತ್ಸವ ದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ ೮ ರಿಂದ ೧೦ ಗಂಟೆಯವರೆಗೆ ಶ್ರೀ ಸ್ವಾಮಿಗೆ ಅಭಿಷೇಕ ನಡೆಯುತ್ತದೆ. ರಥೋತ್ಸವ ದಿನದಂದು ಮಾತ್ರ ಮುಂಜಾನೆ ೪ಗಂಟೆಗೆ ಅಭಿಷೇಕ ಇರುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

You May Also Like