ನಗರದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಗುಬ್ಬಿ ತಾಲೂಕಿನ ಮಾದೇನಹಳ್ಳಿಯಲ್ಲಿ “ರಾಷ್ಟಿeಯ ಬಾಯಿ ಮತ್ತು ದವಡೆ ರೋಗಶಾಸ್ತ್ರ ದಿನ” ಅಂಗವಾಗಿ ಬಾಯಿಯ ಅರೋಗ್ಯ ಮತ್ತು ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮತ್ತು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಸರ್ಕಾರಿ ಪ್ರೌಢ ಶಾಲಾ ಸಭಾಭವನದಲ್ಲಿ ಏರ್ಪಟ್ಟ ಕಾರ್ಯಕ್ರಮವನ್ನು ಬಾಯಿ ಮತ್ತು ದವಡೆ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕೋಕಿಲಾ ಉದ್ಘಾಟಿಸಿ ಮಾತನಾಡಿ, ಬಾಯಿಯ ಆರೋಗ್ಯ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಸಮಸ್ಯೆ ಕುರಿತು ಸಾರ್ವಜನಿಕರಲ್ಲಿ ಅರಿವು ಅಗತ್ಯ ಎಂದರು.
ಚಿಕ್ಕ ಮಕ್ಕಳಲ್ಲಿ ದಂತ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಕುರಿತು ಅವರಲ್ಲಿ ಅರಿವು ಮೂಡಿಸಬೇಕು ಎಂದು ಪೋಷಕರಲ್ಲಿ ವೈದ್ಯರು ವಿನಂತಿಸಿದರು.
ಬಾಯಿ ಮತ್ತು ದವಡೆ ರೋಗಶಾಸ್ತ್ರ ವಿಭಾಗದ ಡಾ.ಲಕ್ಷ್ಮಿದೇವಿ ಬಿ.ಎಲ್ ಮಾತನಾಡಿ, ಹಲ್ಲು ಉಜ್ಜುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಮಾದೇನಹಳ್ಳಿ ಪ್ರೌಢ ಶಾಲೆಯ ಮಲ್ಲಿಕಾರ್ಜುನಯ್ಯ, ಎಸ್‌ಡಿಎಂಸಿ ಮಾಜಿಅಧ್ಯಕ್ಷರಾದ ಗಂಗಾಧರಯ್ಯ, ಬಾಯಿ ಮತ್ತು ದವಡೆ ರೋಗಶಾಸ್ತ್ರ ವಿಭಾಗದ ಡಾ.ಪ್ರವೀಣ ಕೆ.ಎಸ್, ಡಾ.ಶುಭಾ, ಭೂಮಿಕಾ ಎಂ.ಪಿ, ವಂಶಿ.ಬಿ, ವಿಜಯಮ್ಮ ಮುಂತಾದವರು ಉಪಸ್ಥಿತರಿದ್ದರು.
ದಂತ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಮತ್ತು ಪ್ರೌಢ ಶಾಲಾ ಮಕ್ಕಳು ಸೇರಿದಂತೆ ಒಟ್ಟು ೯೭ ಮಂದಿಗೆ ತಪಾಸಣೆ ನಡೆಸಿ, ದಂತ ಮಹಾವಿದ್ಯಾಲಯದಲ್ಲಿ ಹಲ್ಲಿನ ಚಿಕಿತ್ಸೆ ಪಡೆಯಲು ಸಬ್ಸಿಡಿ ದರದಲ್ಲಿ ದೊರೆಯುವ ಶಿಬಿರ ಕಾರ್ಡ್ಗಳನ್ನು ವಿತರಿಸಲಾಯಿತು.