ಆಗಸದಲ್ಲಿ ಜೋಡಿಗ್ರಹ ಮೋಡಿ

ಕೆಲ ದಿನದಿಂದ ಸಂಜೆ ವೇಳೆ ಪಶ್ಚಿಮ ಆಕಾಶದಲ್ಲಿ ಗುರು ಶುಕ್ರರ ಜೋಡಿ ಕಾಣುತ್ತಿದ್ದು ಮಾರ್ಚ್ ಒಂದರಂದು ಗುರು ಗ್ರಹ ಮತ್ತು ಶುಕ್ರ ಗ್ರಹದ ಅರ್ಧ ಡಿಗ್ರಿ ಸಮೀಪ ಕಾಣಿಸಲಿದೆ ಇದು ಬರಿಗಣ್ಣಿಗೆ ಕಾಣುವ ಅತಿ ಸುಂದರ ಗ್ರಹಗಳ ಜೋಡಾಟವಾಗಿದ್ದು ಆಕಾಶದಲ್ಲಿ ಅಪರೂಪದ ವಿದ್ಯಮಾನವಾಗಲಿದೆ.

ಇವು ಕೆಲ ದಿನಗಳಿಂದ ಪಶ್ಚಿಮ ಆಕಾಶದಲ್ಲಿ ಸಂಜೆಯಾಗುತ್ತಿದ್ದಂತೆ ಸೂರ್ಯಸ್ತಕ್ಕೆ ಹಿಡಿದ ಹವಳಿ ಬಿವಟಿಕೆಯ ಎನ್ನುವಂತೆ ಅಕ್ಕಪಕ್ಕದಲ್ಲಿ ಗುರು ಮತ್ತು ಶುಕ್ರ ಗ್ರಹ ಒಳೆಯುತ್ತಿವೆ ಶುಕ್ರ ಭೂಮಿಯಿಂದ ಈಗ ಸುಮಾರು 20.5 ಕೋಟಿ ಕಿಲೋ ಮೀಟರ್ ದೂರದಲ್ಲಿದ್ದರೆ ಗುರು ಭೂಮಿಯಿಂದ 86 ಕೋಟಿ ಕಿಲೋ ಮೀಟರ್ ದೂರದಲ್ಲಿದೆ ಗುರು ಗ್ರಹದ ಗಾತ್ರ ಶುಕ್ರನಿಗಿಂತ ಸುಮಾರು 1400 ಪಟ್ಟು ದೊಡ್ಡದು. ಆದರೂ ಶುಕ್ರ ಪಳಪಳ ಹೊಳೆಯುತ್ತಿದೆ ಶುಕ್ರ ಹೊಳೆಯಲು ಆಗ್ರಹದ ವಾತಾವರಣವೇ ಕಾರಣ ಸ್ವಯಂ ಪ್ರಭೇ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ಆಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್ ನ ತೆಳು ಕವಚ ಸುಮಾರು 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ ಆಕಾಶದಲ್ಲಿ ಬೇರೆ ಬೇರೆ ಎತ್ತರದಲ್ಲಿ ಹೊಳೆಯಲಿದೆ ಆದರೆ ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ ಎಂದು ಭೌತಶಾಸ್ತ್ರಜ್ಞ ಡಾ. ಎ.ಪಿ ಭಟ್ ತಿಳಿಸಿದ್ದಾರೆ

You May Also Like