ಕರಾಮುವಿ ಪ್ರಾದೇಶಿಕ ಕೇಂದ್ರ ತುಮಕೂರು: ಪ್ರವೇಶಾತಿಗೆ ಅರ್ಜಿ ಆಹ್ವಾನ

 

ಮೈಸೂರಿನ ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ೨೦೨೨-೨೩ನೇ (ಜನವರಿ ಆವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ೧೦+೨ (ಪದವಿ ಪೂರ್ವ) ಮತ್ತು ೧೦+೨+೩ (ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ. ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ., ಬಿ.ಎಲ್.ಐ.ಎಸ್ಸಿ ಹಾಗೂ ಬಿ.ಎಸ್ಸಿ (General, Home Science, and I.T)., ಎಂ.ಎ/ಎo.ಸಿ.ಜೆ., ಎಂ.ಕಾo(Dual Specializations)., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಎಂ.ಬಿ.ಎ(Approved by AICTE, New Delhi)., ಪಿ.ಜಿ. ಡಿಪ್ಲೋಮಾ., ಡಿಪ್ಲೋಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ.
ಪ್ರಥಮ ವರ್ಷದ ಪ್ರವೇಶಾತಿ ಶುಲ್ಕದ ವಿವರ:- ಬಿ.ಎ-ರೂ.೪,೯೫೦/-., ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-ರೂ.೧೦,೪೫೦/-., ಬಿ.ಕಾಂ-ರೂ.೭,೪೫೦/-., ಬಿ.ಸಿ.ಎ/ಬಿ.ಎಸ್ಸಿ-ರೂ.೨೦,೪೫೦/-., ಎಂ.ಎ-ರೂ.೮,೯೦೦/-., ಎಂ.ಎಸ್ಸಿ/ಎA.ಬಿ.ಎ- ರೂ.೨೫,೪೫೦/-., ಎಂ.ಕಾA-ರೂ.೧೦,೪೫೦/-., ಎಂ.ಸಿ.ಜೆ-ರೂ.೧೩,೭೦೦/-., ಎಂ.ಎಲ್.ಐ.ಎಸ್ಸಿ-ರೂ.೧೫,೪೫೦/- ಗಳಾಗಿರುತ್ತದೆ. ಪ್ರಥಮ ವರ್ಷದ ಈ ಕೋರ್ಸ್ಗಳ ಪ್ರವೇಶಾತಿಗೆ ೨೦೨೩ರ ಮಾರ್ಚ್ ೩೧ ಕಡೆಯ ದಿನವಾಗಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ ತುಮಕೂರು, ಮೇಳೆಕೋಟೆ, ಗಂಗಸoದ್ರ ಮುಖ್ಯರಸ್ತೆ ದೂರವಾಣಿ ಸಂಖ್ಯೆ- ೦೮೧೬-೨೯೫೫೫೮೦, ೯೮೪೪೫೦೬೬೨೯, ೯೮೮೬೧೧೨೪೩೪, ೭೩೪೯೪೭೪೩೩೯ ಅನ್ನು ಸಂಪರ್ಕಿಸಬಹುದೆoದು ಪ್ರಾದೇಶಿಕ ನಿರ್ದೇಶಕರಾದ ಡಾ. ಆರ್ ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

You May Also Like